ಧಾರವಾಡ
ಯುವತಿಯ ಹೆಸರಿನಲ್ಲಿ ನಕಲಿ ಫೇಸಬುಕ್ ಖಾತೆ ತಗೆದು. ಅದಕ್ಕೆ ಸುಷ್ಮಾ ಸುಕು ಎಂಬ ಹೆಸರನ್ನಿಟ್ಟು ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಫೇಸ್ಬುಕ್ ಮುಖಾಂತರ ಪರಿಚಯ ಮಾಡಿಕೊಂಡು 2017 ರಲ್ಲಿ ವಾಟ್ಸಪ್ ನಂಬರ ಪಡೆದು ಸುಮಾರು 3 ವರ್ಷಗಳಿಂದ ವಾಟ್ಸ್ ಆಪ್ ನಲ್ಲಿ ಹಣ ಹಾಕಿಸಿಕೊಂಡು ವಂಚನೆ ಮಾಡಿದ್ದ ಆರೋಪಿಯನ್ನು ಧಾರವಾಡದಲ್ಲಿ ಬಂಧನ ಮಾಡಲಾಗಿದೆ.


ಹುಬ್ಬಳ್ಳಿಯ ರುದ್ರಗೌಡ ಎಂಬುವರ ಬಳಿ ಹೀಗೆ ಪರಿಚಯ ಮಾಡಿಕೊಂಡು ಇವರಿಂದ ಹಣ ಹಾಕಿಸಿಕೊಂಡು ಶಾಪಿಂಗ್ ಮಾಡುತ್ತಾ ಪಿರ್ಯಾದಿಗೆ ನಾನು ಮೂಕಿ ಕಿವುಡಿ ಇರುತ್ತೇನೆ ಅಂತಾ ಹೇಳಿ ಮಸೇಜ ಮಾಡುತ್ತಾ ನಾನು ನಿಮ್ಮನ್ನು ಪ್ರೀತಿಸು ತ್ತೇನೆ ಮದುವೆ ಆಗುತ್ತೇನೆ ಅಂತಾ ನಂಬಿಸಿ ಪಿರ್ಯಾದಿ ಕಡೆಯಿಂದ ತನಗೆ ಪರಿಚಯಸ್ಥರ 8 ರಿಂದ ಜನರ ಬ್ಯಾಂಕ್ ಖಾತೆಗಳಿಗೆ ಸುಮಾರು 14 ರಿಂದ 15 ಲಕ್ಷ ರೂಪಾಯಿಗಳನ್ನು ಹಾಕಿಸಿಕೊಂಡು ಪಿರ್ಯಾದಿಗೆ ಮೋಸ ಮಾಡಿದ ಪ್ರಕರಣವನ್ನು ಧಾರವಾಡ ಅಪರಾಧ ದಳದ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಸದರ ಪ್ರಕರಣದಲ್ಲಿಯ ಆರೋಪಿ ಪ್ರತಾಪ ಎಂ ಶಂದ ಮೂರ್ತಿ, ಉದ್ಯೋಗ ಕಂಪ್ಯೂಟರ್ ರಿಪೇರಿ ಕೆಲಸ ಮಾಡುತ್ತಿದ್ದು ಹಾಸನ ಇವನನ್ನು ಬಂಧನ ಮಾಡಿ ಇವನಿಂದ 1,25,000/- ಗಳನ್ನು ಸದರಿ ಆರೋಪಿತನಿಂದ ವಶ ಪಡಿಸಿಕೊಂಡಿದ್ದು ಇರುತ್ತದೆ

ಪಿ.ಕೃಷ್ಣಕಾಂತ ಎಸ್ ಪಿ ಧಾರವಾಡ, ರಾಮನಗೌಡ ಹಟ್ಟಿ, ಎಮ್ ಬಿ ಸುಂಕದ, ಡಿಎಸ್ಪಿ, ಧಾರವಾಡ ಗ್ರಾಮೀಣ ವಿಭಾಗ ಇವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ವಿಜಯ ಬಿರಾದಾರ, ವಿ.ಎಸ್ ಬೆಳಗಾಂವಕರ, ಎಎಸ್ಐ, ಪಿ. ಕಾಳಿ, ಎಎಸ್‌ಐ, ಶ್ರೀ ಆರ್ ಎಸ್ ಮಾಧವ ಸೇರಿದಂತೆ ಹಲವು ಸಿಬ್ಬಂದಿ ಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.