ಹುಬ್ಬಳ್ಳಿ ಧಾರವಾಡ –
ಸಾಮಾಜಿಕ ಜಾಲತಾಣ ಫೇಸ್ ಬುಕ್ ಮತ್ತು ವಾಟ್ಸ್ ಆಪ್ ಮುಖಾಂತರ ಅಶ್ಲೀಲ ವಿಡಿಯೋ ಮತ್ತು ನಗ್ನ ಭಾವಚಿತ್ರಗಳನ್ನು ಪ್ರಸಾರ ಮಾಡುತ್ತಿದ್ದ ಆರೋಪಿಯನ್ನು ಹುಬ್ಬಳ್ಳಿ ಧಾರವಾಡ ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ.
ಅಶ್ಲೀಲ ಪೊಟೊ ಮತ್ತು ವಿಡಿಯೋ ಗಳನ್ನು ಅವರಿವರಿಗೆ ಕಳಿಸುತ್ತಾ ಪ್ರಸಾರ ಮಾಡುತ್ತಿದ್ದ ಕುರಿತು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ಬಂದಿತ್ತು.ಇನ್ನೂ ಮಾಹಿತಿಯನ್ನು ಪಡೆದುಕೊಂಡು ಆರೋಪಿಯನ್ನು ಬಂಧನ ಮಾಡಲಾಗಿದೆ.
ಸಚಿನ ಶರಣಬಸಪ್ಪ ಕರಣಿಕ ಆರೋಪಿಯನ್ನು ಬಂಧನ ಮಾಡಲಾಗಿದೆ. ಬಂಧಿತನು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಗೋಳಾಕೆ ಗ್ರಾಮದವನಾಗಿದ್ದಾನೆ.ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಎಸ್ ಬಿ ಮಾಳಗೊಂಡ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧನ ಮಾಡಲಾಗಿದೆ.
ಆರೋಪಿಯನ್ನು ಬಂಧನ ಮಾಡಿ ಹೆಚ್ಚಿನ ತನಿಖೆಯನ್ನು ಪೊಲೀಸರು ಮಾಡತಾ ಇದ್ದಾರೆ. ಇನ್ನೂ ಈ ಒಂದು ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಗಳಾದ ಎಮ್ ಎಸ್ ಹೂಗಾರ, ಎಸ್ ಜಿ ಸಿದ್ದನಗೌಡರ,ಎಮ್ ಬಿ ಅಣ್ವೇಕರ,ಎಸ್ ಎಚ್ ತಿಮ್ಮಾಪೂರ, ಎಸ್ ವಿ ಅಕ್ಕಿಗುಂದಮಠ,ಮೋಹನ ಈಳಿಗೇರ,ಪಿ ಟಿ ಹೆಗ್ಗನ್ನವರ,ಆರ್ ಜಿ ಗೋಕುಲ್,ವ್ಹಿ ಹೆಚ್ ವಗ್ಗರ ಸೇರಿದಂತೆ ಹಲವರು ಈ ಒಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.