ಕೋಲಾರ –
ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ಅನ್ಯಾಯ ಮತ್ತು ಅವಕಾಶ ಸಿಗದ ಹಿನ್ನಲೆಯಲ್ಲಿ ಬೇಸತ್ತ ಶಿಕ್ಷಕ ರೊಬ್ಬರು ರಾಜ್ಯಪಾಲರಿಗೆ ದಯಾಮರಣ ಕೋರಿ ಪತ್ರ ಬರೆದಿದ್ದಾರೆ.ಮಾರ್ಗಸೂಚಿ ಪ್ರಕಟಗೊಂಡ ಬೆನ್ನಲ್ಲೇ ಈ ಒಂದು ವರ್ಗಾವಣೆಯಲ್ಲಿ ಅವಕಾಶ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯಲ್ಲೂರ ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ಡಿ ಶಿವಕುಮಾರ್ ಅವರೇ ದಯಾ ಮರಣ ಕೋರಿ ಪತ್ರ ಬರೆದ ಶಿಕ್ಷಕರಾಗಿದ್ದಾರೆ.ಅತ್ತ ಈ ಒಂದು ಪತ್ರವನ್ನು ಬರೆಯುತ್ತಿದ್ದಂತೆ ಇತ್ತ ಎದ್ದೋ ಬಿದ್ದೊ ಎಂಬಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ನೊಂದುಕೊಂಡಿ ರುವ ಶಿಕ್ಷಕ ಶಿವಕುಮಾರ್ ಅವರನ್ನು ಸಂಪರ್ಕ ಮಾಡಿದ್ದಾರೆ

ಈ ಒಂದು ಕುರಿತು ಸುದ್ದಿ ಸಂತೆ ನ್ಯೂಸ್ ವರದಿ ಪ್ರಸಾರ ಮಾಡಿದ್ದು ವರದಿ ಬರುತ್ತಿದ್ದಂತೆ ಇದರಿಂ ದಾಗಿ ಎಚ್ಚೆತ್ತುಕೊಂಡ ಇಲಾಖೆಯ ಅಧಿಕಾರಿಗಳು ಇವರನ್ನು ಸಂಪರ್ಕ ಮಾಡಿ ನಿಮ್ಮ ಸಮಸ್ಯೆ ಯನ್ನು ನಮ್ಮ ಮುಂದೆ ಹೇಳಿಕೊಳ್ಳಬೇಕಾಗಿತ್ತು ಯಾಕೇ ಹೀಗೆ ಮಾಡಿದ್ದಿರಿ ಎಂದಿದ್ದಾರಂತೆ.

ಈಗಾಗಲೇ ಎಲ್ಲಾ ವಿಚಾರವು ಇಲಾಖೆಯ ಅಧಿಕಾರಿ ಗಳಿಗೆ ಗೊತ್ತಿರುವ ವಿಚಾರ ಹೀಗಿರುವಾಗ ಸುದ್ದಿ ಬರುತ್ತಿದ್ದಂತೆ ಅದರಲ್ಲೂ ದಯಾಮರಣ ಕೋರಿ ಪತ್ರ ಬರೆಯುತ್ತಿದ್ದಂತೆ ಇದರಿಂದಾಗಿ ಇಲಾಖೆ ಗೆ ಒಂದು ಕೆಟ್ಟ ಹೆಸರು ಎಂದುಕೊಂಡಿರುವ ಅಧಿಕಾರಿ ಗಳು ಈಗ ನಿದ್ದೆ ಯಿಂದಾಗಿ ಎಚ್ಚರಗೊಂಡು ನಮ್ಮ ಗಮನಕ್ಕೆ ತರಬೇಕು ಎಂದಿದ್ದು ದುರ್ದೈವದ ಸಂಗತಿ ಏನೇ ಆಗಲಿ ವರ್ಗಾವಣೆ ಸಿಗದೇ ನೊಂದುಕೊಂ ಡಿರುವ ಅದೇಷ್ಟೋ ಶಿಕ್ಷಕರ ನೋವಿಗೆ ಇನ್ನಾದರೂ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಪಂದಿಸಿ ನೆರವಾಗಬೇಕು ಇಲ್ಲವಾದರೆ ಮುಂದೊಂದು ದಿನ ದೊಡ್ಡ ಸಮಸ್ಯೆಯಾಗಲಿದೆ ಈ ವರ್ಗಾವಣೆ ವಿಚಾರ