ಹುಬ್ಬಳ್ಳಿ –
ಕರ್ನಾಟಕ ಬಂದ್‌ಗೆ ಹುಬ್ಬಳ್ಳಿ ಧಾರವಾಡ ದಲ್ಲಿ ನೀರಸ ಪ್ರತಿಕ್ರಿಯೆ ಕಂಡು ಬಂದಿದೆ.ಧಾರವಾಡ ಜಿಲ್ಲೆಯಲ್ಲಿ ಜನ ಜೀವನ ಯಥಾಸ್ಥಿತಿ ಕಂಡು ಬರುತ್ತಿದೆ.ಎಂದಿನಂತೆ ಅಂಗಡಿ ಮುಂಗಟ್ಟುಗಳು ಓಪನ್ ಆಗಿದ್ದು ರಸ್ತೆಗೆ ಇಳಿದ ಆಟೋಗಳು, ಖಾಸಗಿ ಬಸ್‌ಗಳು ಸರ್ಕಾರಿ ಬಸ್ ಓಡಾಡುತ್ತಿವೆ.
ಸಾರಿಗೆ ಸಂಸ್ಥೆಯ ಸಂಚಾರದಲ್ಲಿಯೂ ಯಾವುದೇ ವ್ಯತ್ಯಯ ಇಲ್ಲ.ಇನ್ನೂ ಅವಳಿ ನಗರದಲ್ಲಿ ಯಾವುದೇ ಹೋರಾಟಗಾರರು ಈವರೆಗೆ ಪ್ರತಿಭಟನೆಗೆ ಮಾಡಿಲ್ಲ.ಇನ್ನೂ ವ್ಯಾಪಾರ ವಹಿವಾಟು ಯಥಾವತ್ತಾಗಿ ಎಂದಿನಂತೆ ಆರಂಭವಾಗಿದ್ದು 9 ಗಂಟೆಗೆ ಪ್ರತಿಭಟನೆಯನ್ನು ಹೋರಾಟಗಾರರು ಮಾಡಲಿದ್ದಾರಂತೆ.
ಇನ್ನೂ ಇತ್ತ ಧಾರವಾಡದಲ್ಲೂ ಇದೇ ಚಿತ್ರಣ ಇಲ್ಲೂ ಕೂಡ ಎಂದಿನಂತೆ ಎಲ್ಲವೂ ಕಂಡು ಬಂದಿತು ಒಟ್ಟಾರೆ ಹುಬ್ಬಳ್ಳಿ ಧಾರವಾಡದಲ್ಲಿ ಕರ್ನಾಟಕ ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಇನ್ನೂ ಬಂದ್ ಹಿನ್ನೆಲೆಯಲ್ಲಿ ಅವಳಿ ನಗರದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.