ಹುಬ್ಬಳ್ಳಿ –
ಹುಬ್ಬಳ್ಳಿಯ ಗದಗ ರಸ್ತೆಯಲ್ಲಿ ಕಾರೊಂದು ಪಲ್ಟಿಯಾದ ಘಟನೆ ನಡೆದಿದೆ. ಹೌದು ಹುಬ್ಬಳ್ಳಿ ಯಿಂದ ಗದಗ ಕಡೆಗೆ ಹೊರಟಿದ್ದ ಬೆಲೆನೊ ಕಾರಿಗೆ ನಾಯಿ ಅಡ್ಡ ಬಂದಿದೆ. ಏಕಾಏಕಿಯಾಗಿ ಅಡ್ಡವಾಗಿ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಚಾಲಕ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ
ಹುಬ್ಬಳ್ಳಿಯಿಂದ ಗದಗ ಗೆ ಕಾರು ಹೊರಟಿತ್ತು.ಇನ್ನೂ ಕಾರಿನಲ್ಲಿ ಗದಗ ನಿವಾಸಿ ಸಂತೋಷ ವನಗೇರಿ ಕಾರನ್ನು ಚಲಾಯಿಸುತ್ತಿದ್ದರು.
ವೇಗವಾಗಿ ಹೊರಟಿದ್ದ ಕಾರಿಗೆ ಏಕಾಏಕಿಯಾಗಿ ನಾಯಿ ಅಡ್ಡ ಬಂದಿದೆ.ಅದನ್ನು ತಪ್ಪಿಸಲು ಹೋಗಿ ಸಂತೋಷ ಅವರು ಕಾರಿನ ನಿಯಂತ್ರಣ ಕಳೆದುಕೊಂಡಿದ್ದು ಡಿವೈಡರ್ ಗೆ ಡಿಕ್ಕಿಯಾಗಿ ಎರಡು ಪಲ್ಟಿಯಾಗಿದೆ
ಎರಡು ಪಲ್ಟಿಯಾದರು ಕೂಡಾ ಸೀಟ್ ಬೆಲ್ಟ್ ಹಾಕಿಕೊಂಡಿದ್ದಕ್ಕೆ ಕಾರಿನಲ್ಲಿದ್ದ ಸಂತೋಷ ಗೆ ಯಾವುದೇ ರೀತಿಯ ಯಾವುದೇ ಗಾಯಗಳಾಗದೇ ಪಾರಾಗಿದ್ದಾರೆ
ಇನ್ನೂ ವಿಷಯ ತಿಳಿದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಸಿಬ್ಬಂದಿ ಗಳಾದ ಕಾಂತೇಶ ಹಳ್ಳಿಕೇರಿ,ಸಿದ್ದು ಗಾಯಕವಾಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.