ಬೆಂಗಳೂರು –
ಪತಿ ಐಎಫ್ಎಸ್ ಅಧಿಕಾರಿಯಾದ್ರೆ ಪತ್ನಿ ಐಪಿಎಸ್ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತೆ ಬದುಕ ಬೇಕಿದ್ದ ಜೋಡಿಯ ಜೀವನ ಈಗ ಬೀದಿಗೆ ಬಿದ್ದಿದೆ. ಪತಿಯ ಕಿರುಕುಳಕ್ಕೆ ಬೇಸತ್ತ ಐಪಿಎಸ್ ಅಧಿಕಾರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ದಕ್ಷ ಐಪಿಎಸ್ ಆಫೀಸರ್ ಎಂದು ಹೆಸರು ಪಡೆದಿದ್ದ ವರ್ತಿಕಾ ಕಟಿಯಾರ್ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತನ್ನ ಪತಿ ನಿತಿನ್ ಸುಭಾಶ್ ಹಾಗೂ ಅವರ ಕುಟುಂಬದವರ ವಿರುದ್ದ ದೂರು ನೀಡಿದ್ದಾರೆ.

ವರದಕ್ಷಿಣೆ ಕಿರುಕುಳ ನೀಡಿದ್ದು ಅಲ್ಲದೇ ದೈಹಿಕವಾಗಿ ಹಲ್ಲೆ ಮಾಡಿದ್ದಾರೆಂದು ದೂರು ನಲ್ಲಿ ಉಲ್ಲೇಖ ಮಾಡಿದ್ದಾರೆ. 2009ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ವರ್ತಿಕಾ ಕಟಿಯಾರ್ 2011ರಲ್ಲಿ ಐಎಫ್ಎಸ್ ಅಧಿಕಾರಿ ನಿತಿನ್ ಸುಭಾಶ್ ರನ್ನ ವಿವಾಹವಾಗಿದ್ರು. ವರ್ಷ ಕಳೆದಂತೆ ನಿತಿನ್ ವರ್ತಿಕಾ ರಿಗೆ ಹಣಕ್ಕಾಗಿ ಹಿಂಸೆ ನೀಡಿದ್ದು ಅಲ್ದೇ ದೈಹಿಕವಾಗಿ ಹಲ್ಲೆ ನಡೆಸಿದ್ದಾರಂತೆ.

ಅತಿಯಾದ ಮದ್ಯ ಸಿಗರೇಟ್ ಬಿಡಿ ಎಂದಿದ್ದಕ್ಕೆ ಹಲ್ಲೆ ಮಾಡುತ್ತಿದ್ದರಂತೆ ….ವರ್ತಿಕಾ ಕಟಿಯಾರ್ ಗೆ ಜೀವ ಬೆದರಿಕೆ ಹಾಕಿದರಂತೆ ಪತಿರಾಯ..!!

ಹೌದು ಇನ್ನು ಮದುವೆಯ ಬಳಿಕ ನಿತಿನ್ ಸುಭಾಶ್ ಅತಿಯಾಗಿ ಮದ್ಯ ಸೇವಿಸುವುದು ಜೊತೆಗೆ ಸಿಗರೇಟ್ ಸೇದುವುದು ಮಾಡ್ತಾಯಿದ್ರಂತೆ. ಇದನ್ನ ಕಟಿಯಾರ್ ಪ್ರಶ್ನಿಸಿದ್ದಾರೆ. ಈ ಅಭ್ಯಾಸವನ್ನು ಬದಲಾಯಿಸಿಕೊಳ್ಳುವಂತೆ ತಿಳಿಸಿದ್ದಾರೆ. ಇದರಿಂದ ಕುಪಿತಗೊಂಡ ಪತಿ ನಿತಿನ್ ಪತ್ನಿ ಕಟಿಯಾರ್ ಗೆ ಹಲ್ಲೆ ಮಾಡಿದ್ದಾರಂತೆ.

ಸದ್ಯ ಪತಿ ಹಾಗೂ ಅವರ ಮನೆಯವರ ನಡುವಳಿಕೆಯಿಂದ ಬೇಸತ್ತ ಕಟೀಯಾರ್ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ನೀಡಿದ್ದಾರೆ. ಪತಿ ಸೇರಿದಂತೆ ಒಟ್ಟು ಏಳು ಜನರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದಾರೆ.

ಇನ್ನೂ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆ ನಡೆದಿದ್ದು ದೆಹಲಿ ಯಾದ ಕಾರಣ ಪ್ರಕರಣವನ್ನು ದೆಹಲಿಗೆ ವರ್ಗಾಯಿಸಿದ್ದಾರೆ.

ಅದೇನೆ ಆಗ್ಲಿ ಐಪಿಎಸ್, ಐಎಫ್ಎಸ್ ಅಧಿಕಾರಿಯಾಗಿದ್ದುಕೊಂಡು ಮತ್ತೊಬ್ಬರಿಗೆ ಮಾರ್ಗದರ್ಶಕರಾಗಬೇಕಿದ್ದವರೆ ಈ ರೀತಿ ಯಾದ್ರೆ ಸಾಮಾನ್ಯರ ಗತಿ ಏನು ಎಂಬಾಂತಾಗಿದೆ.