ನವದೆಹಲಿ –
ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ದರ 200 ಇಳಿಸಿ ಸಾರ್ವಜನಿಕ ರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ ಹೌದು ಕೆಲ ವರ್ಷಗಳಿಂದ ಬೆಲೆ ಏರಿಕೆ ಯ ಬಿಸಿಯಿಂದಾಗಿ ಬೇಸತ್ತಿದ್ದ ಜನತೆಗೆ ಕೊನೆಗೂ ಭರ್ಜರಿ ನೆಮ್ಮದಿ ಸುದ್ದಿ ಯನ್ನು ನೀಡಿದೆ
ಕೇಂದ್ರ ಸರ್ಕಾರವು ಎಲ್ಲ ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ₹200 ರೂಪಾಯಿ ಇಳಿಕೆ ಮಾಡಿರುವುದಾಗಿ ಘೋಷಿಸಿದೆ.ಕೇಂದ್ರ ಸಚಿವ ಸಂಪುಟದ ತೀರ್ಮಾನವನ್ನು ದೆಹಲಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಈ ಒಂದು ಮಾಹಿತಿಯನ್ನು ನೀಡಿದರು
ಓಣಂ ಮತ್ತು ರಕ್ಷಾಬಂಧನ್ ಹಬ್ಬದ ಸಂದರ್ಭ ದಲ್ಲಿ ಎಲ್ಲ ಗ್ರಾಹಕರಿಗೆ ಎಲ್‌ಪಿಜಿ ದರವನ್ನು 200 ರೂಪಾಯಿಗಳಷ್ಟು ಕಡಿಮೆ ಮಾಡಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ. ಮಹಿಳೆಯ ರಿಗೆ ಇದು ವಿಶೇಷ ಉಡುಗೊರೆ ಎಂದು ಹೇಳಿದರು
ಸುದ್ದಿ ಸಂತೆ ನ್ಯೂಸ್ ನವದೆಹಲಿ…..