ಬೆಂಗಳೂರು –
ಕರೋನಾ ಮಹಾಮಾರಿಯ ನಡುವೆ ರಾಜ್ಯದಲ್ಲಿ ಈಗಾಗಲೇ ಎರಡು ಹಂತಗಳಲ್ಲಿ ಶಾಲೆಗಳನ್ನು ಆರಂಭ ಮಾಡಲಾಗಿದೆ.6 ರಿಂದ ಮೇಲ್ಪಟ್ಟ ವರ್ಗಗ ಳನ್ನು ಆರಂಭ ಮಾಡಲಾಗಿದ್ದ ಇನ್ನೂ ಯಾವುದೇ ಆತಂಕ ಸಮಸ್ಯೆ ತೊಂದರೆ ಇಲ್ಲದೇ ಶಿಕ್ಷಕರ ಶ್ರಮ ದಿಂದ ಸಾರ್ವಜನಿಕರ ಸಹಕಾರಿಂದ ಯಶಶ್ವಿಯಾಗಿ ಶಾಲೆಗಳು ನಡೆಯುತ್ತಿದ್ದು ಮಕ್ಕಳು ಕೂಡಾ ತುಂಬಾ ಉತ್ಸಾಹದಿಂದ ಶಾಲೆಗಳಿಗೆ ಬರುತ್ತಿದ್ದು ಇತ್ತ ಶಿಕ್ಷಕರು ಕೂಡಾ ನೂರೆಂಟು ಸಮಸ್ಯೆಗಳಿದ್ದರೂ ಕೂಡಾ ಅವುಗಳೆಲ್ಲವನ್ನೂ ಬದಿಗಿಟ್ಟು ಮಕ್ಕಳೊಂದಿಗೆ ಮಕ್ಕಳಾಗಿ ಪಾಠವನ್ನು ಮಾಡುತ್ತಿದ್ದಾರೆ.ಇದು ಸಧ್ಯದ ವಿಚಾರವಾದರೆ ಇನ್ನೂ ಪ್ರಮುಖವಾಗಿ ಕಳೆದ ಹಲವು ದಿನಗಳಿಂದ ಶಾಲೆಗಳ ಆರಂಭಕ್ಕೆ ನಿರಂತರವಾದ ಒತ್ತಡಗಳು ಕೇಳಿ ಬರುತ್ತಿದ್ದವು ಹೀಗಾಗಿ ಶಾಲೆಗಳನ್ನು ಆರಂಭ ಮಾಡಲಾಗಿದ್ದು ಇದರ ನಡುವೆ ಈಗ ಮತ್ತೊಂದು ಒತ್ತಡ ಹೆಚ್ಚಾಗುತ್ತಿದೆ.ಹೌದು ಶಾಲೆಗಳು ಆರಂಭ ಗೊಂಡ ಬೆನ್ನಲ್ಲೇ ಮಕ್ಕಳಿಗೆ ಬಿಸಿಯೂಟ ಹಾಗೂ ಕ್ಷೀರಭಾಗ್ಯದ ಹಾಲು ನೀಡಬೇಕು ಎಂಬ ಬೇಡಿಕೆ ಹೆಚ್ಚುತ್ತಿದೆ.
ಆದರೆ, ಇದಕ್ಕೆ ಕೇಂದ್ರ ಸರಕಾರದ ಅನುಮತಿ ಅಗತ್ಯವಿದೆ.ಈಗಾಗಲೇ ಈಕುರಿತಂತೆ ಕೇಂದ್ರ ಸರ್ಕಾರ ಈಒಂದು ಯೋಜನೆಯ ಕುರಿತಂತೆ ಆಡಿಟ್ ಮಾಡಲು ಮುಂದಾಗಿದ್ದು ಹೀಗಾಗಿ ವಿಳಂಬವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇನ್ನೂಸಧ್ಯ ವಿದ್ಯಾರ್ಥಿಗಳಿಗೆ ಆಹಾರ ಧಾನ್ಯವನ್ನೇ ವಿತರಿಸುತ್ತಿದ್ದೇವೆ. ಕೇಂದ್ರದಿಂದ ಅನುಮತಿ ಸಿಕ್ಕಿದ ಬಳಿಕ ಬಿಸಿಯೂಟ ಆರಂಭಿಸಲಾಗುವುದು ಎಂದು ಅಧಿಕಾರಿಯೊಬ್ಬರು ಸುದ್ದಿ ಸಂತೆ ಗೆ ತಿಳಿಸಿದ್ದಾರೆ.