ಉತ್ತರಪ್ರದೇಶ –
ಸರ್ಕಾರಿ ಅಧಿಕಾರಿಗಳು ನೌಕರರ ಅನಾವಶ್ಯಕ ಖರ್ಚಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕಡಿವಾಣ ಹಾಕಿದ್ದು ಇನ್ನು ಮುಂದೆ ರಾಜ್ಯದ ಜಿಲ್ಲೆಗಳಲ್ಲಿ ಪ್ರವಾಸಕ್ಕೆ ತೆರಳುವಾಗ ಹೊಟೇಲ್ ಗಳಲ್ಲಿ ಉಳಿದು ಕೊಳ್ಳುವ ಬದಲು ಗೆಸ್ಟ್ ಹೌಸ್ಗಳಲ್ಲಿ ಉಳಿದುಕೊಳ್ಳುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ.ಹೌದು ಸಾಮಾನ್ಯವಾಗಿ ಸರ್ಕಾರಿ ಕಚೇರಿ ಗಳಲ್ಲಿ ಮಧ್ಯಾಹ್ನ 1:30 ರಿಂದ 2:00 ಗಂಟೆಯವರೆಗೆ ಊಟದ ವಿರಾಮ ಇರುತ್ತದೆ.ಆದರೆ ಕೆಲವರು ಊಟದ ವಿರಾಮವನ್ನು ಹೆಚ್ಚು ಸಮಯ ತೆಗೆದುಕೊಂಡು ಬಳಿಕ ತಮ್ಮ ಕಚೇರಿಗಳಿಗೆ ಹಿಂತಿರುಗುತ್ತಾರೆ.
ಹೀಗಾಗಿ ಎಲ್ಲರೂ 30 ನಿಮಿಷಗಳ ಊಟದ ವಿರಾಮ ವನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ.ಸರ್ಕಾರಿ ಕಚೇರಿಗಳಲ್ಲಿ ನಿಯೋಜನೆಗೊಂಡ ಅಧಿಕಾರಿಗಳು ಹಾಗೂ ನೌಕರರು ಸರಿಯಾದ ಸಮಯಕ್ಕೆ ಹಾಜರಿರಬೇಕು.ಒಂದು ವೇಳೆ ತಡವಾಗಿ ಕಚೇರಿಗೆ ಬಂದಲ್ಲಿ ಅವರನ್ನು ಸ್ವೀಕರಿಸಲಾ ಗುವುದಿಲ್ಲ.ಹಿರಿಯ ಅಧಿಕಾರಿಗಳು ನಿತ್ಯ ಕಚೇರಿಗಳಲ್ಲಿ ದಿಢೀರ್ ತಪಾಸಣೆ ನಡೆಸಬೇಕು.ಈ ಬಗ್ಗೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳು ಹಾಗೂ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿದರು.