ಬೆಂಗಳೂರು –
ಕೊನೆಗೂ ರಾಜ್ಯದ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಕೇಂದ್ರ ಮಾದರಿಯ 7ನೇ ವೇತನ ನೀಡುವ ಕುರಿತಂತೆ ಬರುವ ಅಕ್ಟೋಬರ್ ನಲ್ಲಿ ಸಮಿತಿಯನ್ನು ರಚನೆ ಮಾಡೊದಾಗಿ ಹೇಳಿದ್ದಾರೆ.ನೀವು ಹೇಳಿದಂತೆ ಮತ್ತು ಈಗಾಗಲೇ 6ನೇ ವೇತನ ಆಯೋಗದ ಅವಧಿ ಮುಗಿದಿದ್ದು ಹೀಗಾಗಿ ಹೇಳಿದರಾಯಿತು ಹೇಳಿದಿದ್ದರೂ ಇದನ್ನು ನೀಡ ಲೇಬೇಕು ಇದೇಲ್ಲಾ ಸಾಮಾನ್ಯವಾದ ವ್ಯವಸ್ಥೆ ಆದರೂ ಕೂಡಾ ಇಂದು ಬೆಂಗಳೂರಿನಲ್ಲಿ ನಡೆದ ಸರ್ವೋತ್ತಮ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಕಾರ್ಯ ಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಹಿತರಕ್ಷಣೆ ನಮ್ಮ ಕರ್ತವ್ಯ ಎಂದು ಹೇಳಿದರು,ಕಷ್ಡದಲ್ಲೂ ಕೋವಿಡ್ ಸಮಯದಿಂದ ಈವರೆಗೆ ಸಾಕಷ್ಟು ಪ್ರಮಾಣದಲ್ಲಿ ನಿವೇಲ್ಲಾ ಪ್ರಾಮಾಣಿಕವಾಗಿ ಕೆಲಸವನ್ನು ಮಾಡಿದ್ದು ಸಂತೋಷದ ವಿಚಾರವಾಗಿದ್ದು ನಿಮ್ಮಿಂದಲೇ ಸಾಕಷ್ಟ ಪ್ರಮಾಣದಲ್ಲಿ ರಾಜ್ಯ ಅಭಿವೃದ್ದಿ ಯಾಗಿದೆ ಎನ್ನುತ್ತಾ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ ಕೆಲವೊಂದಿಷ್ಟು ವಿಚಾರಗಳನ್ನು ಪ್ರಸ್ತಾಪವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರು ಮಾಡಿದರು.
ಆತ್ಮಸಾಕ್ಷಿಯಾಗಿ ಕೆಲಸ ಮಾಡುವಂತೆ ನೌಕರರಿಗೆ ಕರೆಯನ್ನು ನೀಡಿದರು. ಇನ್ನೂ ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ನಿಮ್ಮ ಪಾತ್ರ ತುಂಬಾ ಮಹತ್ವ ಇದೆ ಎನ್ನುತ್ತಾ ಜನ ಸಾಮಾನ್ಯರು ಕಚೇರಿಗೆ ಬಂದಾಗ ಗೌರವ ಕೊಡಿ ಪ್ರಾಮಾಣಿಕ ಕೆಲಸ ಮಾಡಿ ಅದರಲ್ಲಿ ಸಿಗುವ ಖುಷಿ ಯಾವುದರಲ್ಲೂ ಸಿಗೋದಿಲ್ಲ ದುಡ್ಡಿನಿಂದ ನಾವು ಏನೇಲ್ಲಾ ಮಾಡಬಹುದು ಆದರೆ ಆತ್ಮಕ್ಕೆ ಸರಿಯಾಗಿದ್ದನ್ನು ಮಾಡಿದಾಗ ಸಂತೋಷವಾಗುತ್ತದೆ ಎಂದರು.ಇನ್ನೂ ನೀವು ನಾವು ಸರ್ಕಾರದ ಒಂದು ಭಾಗ ನಿಮ್ಮನ್ನು ಗೌರವದಿಂದ ಕಾಣೋದು ನಮ್ಮ ಗುರಿ ನಿಮ್ಮ ಸೇವೆಗೆ ನಾವು ಸರ್ಕಾರ ಸದಾ ಸಿದ್ದ ಎನ್ನುತ್ತಾ ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ ವೇತನ ನೀಡುವ ವಿಚಾರ ಕುರಿತಂತೆ ಬರುವ ಅಕ್ಟೋಬರ್ ನಲ್ಲಿ ಸಮಿತಿ ರಚನೆಯನ್ನು ಮಾಡೋದಾಗಿ ಹೇಳಿದರು. ಸರಿ ಇದೇಲ್ಲಾ ಒಂದು ವಿಚಾರವಾದರೆ ಇನ್ನೂ ಪ್ರಮುಖವಾಗಿ ರಾಜ್ಯದ ಸಮಸ್ತ ರಾಜ್ಯ ಸರ್ಕಾರಿ ನೌಕರರ ಬಗ್ಗೆ ನಿಮಗೆ ಅಪಾರ ಗೌರವ ಕಾಳಜಿ ಇರೋದಾದರೆ ಯಾವ ಸಮಿತಿಯನ್ನು ರಚನೆ ಮಾಡದೇ ವಿನಾಕಾರಣ ವಿಳಂಬವನ್ನು ಮಾಡದೇ ಘೋಷಣೆ ಮಾಡಿ ಕಾಲಹರಣ ಮಾಡುವ ಬದಲಿಗೆ ಹೀಗ್ಯಾಕೆ ಮಾಡತಾ ಇದ್ದೀರಾ ಹೀಗೆ ರಾಜ್ಯದ ಸಮಸ್ತ ಸರ್ಕಾರಿ ನೌಕರರು ಕೇಳುತ್ತಿದ್ದು ಸಧ್ಯ ಬೆಂಗಳೂರು ಮಹಾನಗರ ಪಾಲಿಕೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ ನಂತರ ಮತ್ತೊಂದು ಇನ್ನೊಂದು ಹೀಗೆ ಸಾಲು ಸಾಲು ಚುನಾವಣೆಗಳು ಬರಲಿದ್ದು ವೇತನ ಸಮಿತಿಗೆ ಘೋಷಣೆಗೆ ವರದಿಗೆ ಚುನಾವಣೆಯ ನೀತಿ ಸಂಹಿತೆ ಅಢ್ಡಿಯಾಗಲಿದ್ದು ಹೀಗಾಗಿ ಈ ಕೂಡಲೇ ಸಮಿತಿ ರಚನೆಯ ಬದಲಿಗೆ ಮಧ್ಯಂತರ ಪರಿಹಾರವನ್ನು ಘೋಷಣೆ ಮಾಡಿ ಇದರೊಂದಿಗೆ ವೇತನವನ್ನು ಘೋಷಣೆ ಮಾಡಿ ಎಂಬ ಒತ್ತಾಯವನ್ನು ನಿಮ್ಮ ಸುದ್ದಿ ಸಂತೆ ಸಮಸ್ತ ರಾಜ್ಯದ ಸರ್ಕಾರಿ ನೌಕರರ ಪರವಾಗಿ ಒತ್ತಾಯವನ್ನು ಮಾಡುತ್ತಿದೆ.