ಹುಬ್ಬಳ್ಳಿ –
ಇನ್ನೇನು ಗಣಪತಿ ಹಬ್ಬ ಬಂದೆ ಬಿಟ್ಟಿತು ಹಬ್ಬಕ್ಕೆ ಒಂದೇ ವಾರ ಬಾಕಿ ಇರುವಾಗಲೇ ಇತ್ತ ಹುಬ್ಬಳ್ಳಿ ಯಲ್ಲಿ ಗಣಪತಿ ವಿಸರ್ಜನೆ ಗೆ ಪಾಲಿಕೆಯ ಮೇಯರ್ ರಾಮಣ್ಣ ಬಡಿಗೇರ,ಆಯುಕ್ತ ರಾದ ಡಾ ಈಶ್ವರ ಉಳ್ಳಾಗಡ್ಡಿ ಯವರು ಸಿದ್ದತೆ ಕುರಿತು ಪರಿಶೀಲನೆ ಮಾಡಿದರು
ಮಹಾಪೌರರು ಹಾಗೂ ಆಯುಕ್ತರಿಂದ ಗಣೇಶ ವಿಸರ್ಜನಾ ಕೆರೆಯ ಪರಿಶೀಲನೆ ನಡೆಯಿತು
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾ ಪೌರರಾದ ರಾಮಪ್ಪ ಬಡಿಗೇರ್, ಆಯುಕ್ತರಾದ ಡಾಕ್ಟರ್ ಈಶ್ವರ್ ಉಳ್ಳಾಗಡ್ಡಿ ಅವರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಹೊಸೂರು ಗಣಪತಿ ವಿಸರ್ಜನಾ ಬಾವಿಯನ್ನು ಹಾಗೂ ಗ್ಲಾಸ್ ಹೌಸ್ ಆವರಣದಲ್ಲಿರುವ ಬಾವಿ ಯನ್ನು ಪರಿಶೀಲಿಸಿರು
ಗಣೇಶ್ ವಿಸರ್ಜನಾ ಸಮಯದಲ್ಲಿ ಕೈಗೊಳ್ಳ ಬೇಕಾದ ಮುಂಜಾಗ್ರತಾ ಕ್ರಮ ಹಾಗೂ ಬಾವಿಯ ಸ್ವಚ್ಛತಾ ಕಾರ್ಯ, ವಿದ್ಯುತ್ ಹಾಗೂ ಸುತ್ತಮುತ್ತ ಲಿನ ಪ್ರದೇಶದಲ್ಲಿ ನಡೆಯುತ್ತಿರುವ ಸ್ವಚ್ಛತಾ ಕಾರ್ಯವನ್ನು ಪರಿಶೀಲಿಸಿ ಸ್ಥಳದಲ್ಲಿ ಹಾಜರಿದ್ದ ಅಭಿಯಂತರರಿಗೆ ಹಾಗೂ ಆರೋಗ್ಯ ನಿರೀಕ್ಷಕ ರುಗಳಿಗೆ ನಿರ್ದೇಶನ ನೀಡಿದರು.
ಸ್ಥಳದಲ್ಲಿ ಹಾಜರಿದ್ದ ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಹಾಮಂಡಳದ ಡಿ ಗೋವಿಂದ ರಾವ್ ಹಾಗೂ ಪಾಲಿಕೆಯ ಸದಸ್ಯರು ಗಳ ಜೊತೆ ಕೆರೆಯ ಸ್ವಚ್ಛತೆಯ ಕುರಿತು ಚರ್ಚಿಸಿ ದರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಅಭಿಯಂತರರು ಹಾಗೂ ಆರೋಗ್ಯ ನಿರೀಕ್ಷಕರು ಸ್ಥಳದಲ್ಲಿ ಹಾಜರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..