ಬೆಂಗಳೂರು –
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಅನ್ವಕುಮಾರ್ ಅವರು ತುರ್ತು ವಿಡಿಯೋ ಸಂವಾದ ವನ್ನು ಕರೆದಿದ್ದಾರೆ.ನಾಳೆ ಮಧ್ಯಾಹ್ನ 3 ಗಂಟೆಗೆ ಈ ಒಂದು ವಿಡಿಯೋ ಸಂವಾದ ವನ್ನು ಆಯುಕ್ತರು ರಾಜ್ಯದ ಎಲ್ಲಾ ಜಿಲ್ಲೆಯ ಉಪ ನಿರ್ದೇಶಕರು ಮಯ ಅಪರ ಆಯುಕ್ತರು ಇವರೊಂದಿಗೆ ನಡೆಸಲಿದ್ದಾರೆ.

ನಾಳೆಯ ಈ ಒಂದು ವಿಡಿಯೋ ಸಂವಾದ ದಲ್ಲಿ SSLC ಪರೀಕ್ಷೆ,ಶಿಕ್ಷಕರ ವರ್ಗಾವಣೆ, ವಿದ್ಯಾರ್ಥಿ ಗಳ ದಾಖಲಾತಿ,ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚೆ ಮಾಡುವ ವಿಷಯ ವನ್ನು ಉಲ್ಲೇಖ ಮಾಡಲಾಗಿದೆ.

ನಾಳೆ ಮಧ್ಯಾಹ್ನ ನಡೆಯಲಿರುವ ಈ ಒಂದು ಮಹತ್ವದ ವಿಡಿಯೋ ಸಂವಾದ ದಲ್ಲಿ ಸಧ್ಯ ರಾಜ್ಯದಲ್ಲಿ ದೊಡ್ಡ ಸಮಸ್ಯೆ ಆಗಿರುವ ಹಾಗೇ ತಲೆ ನೋವಾಗಿರುವ ಶಿಕ್ಷಕರ ವರ್ಗಾವಣೆ ಕುರಿತು ಸ್ಪಷ್ಟ ಮಾಹಿತಿ ಹಾಗೇ ಏನಾದರೂ ಬದಲಾವಣೆ ಆಗುತ್ತದೆ ಎಂಬ ನಿರೀಕ್ಷೆಯಲ್ಲಿ ನಾಡಿನ ಶಿಕ್ಷಕರು ಇದ್ದಾರೆ

ಹಾಗೇ ಪ್ರಮುಖವಾಗಿ ವರ್ಗಾವಣೆ ನೀತಿಯಲ್ಲಿ ಏನಾದರೂ ಬದಲಾವಣೆ ಆಗುತ್ತದೆನಾ ಆಗಲೇ ಬೇಕು ಎಂಬ ಒತ್ತಾಯವನ್ನು ನಾಡಿನ ಶಿಕ್ಷಕರು ಮಾಡುತ್ತಿದ್ದಾರೆ