ಬೆಂಗಳೂರು –
ಎಡವಟ್ಟು ಮಾಡಿಕೊಂಡ Psi ಎತ್ತಂಗಡಿ – ಜೈಲಿಗೆ ಹೋಗಿ ಬಂದವರನ್ನು ಸಮವಸ್ತ್ರದಲ್ಲಿ ಯೇ ಸನ್ಮಾನಿಸಿದ್ದ PSI ಗೆ ಎತ್ತಂಗಡಿ ಮಾಡಿದ ಆಯುಕ್ತರು ಹೌದು ಬಿಗ್ ಬಾಸ್ ಸ್ಪರ್ಧೆ ವರ್ತೂರ್ ಪ್ರಕಾಶ್ ರನ್ನು ಸನ್ಮಾನಿಸಿ ಗೌರವಿಸಿದ್ದ ಪೊಲೀಸ್ ಅಧಿಕಾರಿ ಯೊಬ್ಬರನ್ನು ಎತ್ತಂಗಡಿ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವರ್ತೂರ್ ಸಂತೋಷ್ಗೆ ಪೊಲೀಸ್ ಸಮವಸ್ತ್ರದಲ್ಲಿ ಸನ್ಮಾನ ಮಾಡಿದ್ದ ಸಬ್ ಇನ್ಸ್ಪೆಕ್ಟರ್ ತಿಮ್ಮರಾಯಪ್ಪ ಅವರನ್ನು ರಾತ್ರೋರಾತ್ರಿ ವಗಾರ್ವಣೆ ಮಾಡಲಾಗಿದೆ.
ವರ್ತೂರು ಠಾಣೆ ಎಸ್‌ಐ ಆಗಿದ್ದ ತಿಮ್ಮರಾಯಪ್ಪ ಅವರನ್ನು ಆಡುಗೋಡಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ವರ್ತೂರ್ ಸಂತೋಷ್ ಅವರಿಗೆ ಸನ್ಮಾನ ಮಾಡಿ ಅಭಿನಂದನೆ ತಿಳಿಸಿದ್ದರು.ವಿಡಿಯೋ ಮತ್ತು ಪೊಟೊ ಗಳು ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದವು.ಈ ಒಂದು ಬೆನ್ನಲ್ಲೇ ವರ್ಗಾವಣೆ ಮಾಡಲಾಗಿದೆ.ವರ್ತೂರ್ ಸಂತೋಷ್ ಇದ್ದ ಜಾಗಕ್ಕೆ ಹೋಗಿ ಎಸ್ ಐ ಅವರು ಸನ್ಮಾನ ಮಾಡಿದ್ದರು ಅಲ್ಲದೇ ಈ ವೇಳೆ ಪೊಲೀಸ್ ಸಮವಸ್ತ್ರ ಧರಿಸಿದ್ದರು.
ಸಬ್ ಇನ್ಸ್ ಪೆಕ್ಟರ್ ಅವರೊಂದಿಗೆ ಕೆಲ ಕ್ರೈಂ ಸಿಬ್ಬಂದಿಗಳು ಸನ್ಮಾನದ ವೇಳೆ ಹಾಜರಿದ್ದರು. ವರ್ತೂರು ಪೊಲೀಸ್ ಠಾಣೆಯ ಎಸ್‌ಐ ತಿಮ್ಮರಾಯಪ್ಪ ಅವರು ವರ್ತೂರ್ ಸಂತೋಷ್ ಅವರಿಗೆ ಸನ್ಮಾನ ಮಾಡಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು
.ಇನ್ಸ್ಪೆಕ್ಟರ್ ಅವರ ನಡೆಗೆ ಹಲವರು ಬೇಸರ ವ್ಯಕ್ತಪಡಿಸಿದ್ದರು. ಜೈಲಿಗೆ ಹೋಗಿ ಬಂದ ಆರೋಪಿಗೆ ಸಮವಸ್ತ್ರದಲ್ಲಿ ಅವರಿದ್ದ ಸ್ಥಳಕ್ಕೆ ಹೋಗಿ ಸನ್ಮಾನ ಮಾಡುವ ಅಗತ್ಯವೇನಿತ್ತು ಎಂದು ಹಲವು ಪ್ರಶ್ನಿಸಿದ್ದರು.ಇತ್ತೀಚಿಗೆ ಕೆಲ ತಿಂಗಳ ಹಿಂದೆ ಜೈಲಿಗೆ ಹೋಗಿ ಬಂದಿದ್ದ ವರ್ತೂರ್ ಸಂತೋಷ್ ಅವರ ವಿಚಾರ ಗೊತ್ತಿದ್ದರು
ಸಹ ಪೊಲೀಸರು ಯೂನಿಫಾರ್ಮ್ ನಲ್ಲಿಯೇ ಸನ್ಮಾನ ಮಾಡಿದ್ದು ಎಷ್ಟು ಸರಿ ಅಂತ ಕೆಲವರು ಬೇಸರ ಹೊರ ಹಾಕಿದ್ದರು ಇದೇಲ್ಲದರ ನಡುವೆ ಈಗ ಪೊಲೀಸ್ ಅಧಿಕಾರಿಯನ್ನು ಎತ್ತಂಗಡಿ ಮಾಡಿ ಶಿಕ್ಷೆಯನ್ನು ನೀಡಲಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..