ಹುಬ್ಬಳ್ಳಿ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗೆ ಸಿದ್ಧತೆ ನಡೆಸಿದ್ದ ರೌಡಿಗಳಿಗೆ ಹುಬ್ಬಳ್ಳಿಯಲ್ಲಿ ಪೊಲೀಸ್ ಕಮೀಷನರ್ ಶಾಕ್ ಕೊಟ್ಟಿದ್ದಾರೆ.

ಹೌದು.. ಕಳೆದ ವಾರದಿಂದ ರೌಡಿಗಳ ಮನೆ ಮೇಲೆ
ಹು-ಧಾ ಪೊಲೀಸ್ ಕಮೀಷನರ್ ಲಾಭುರಾಮ್ ಸೂಚನೆಯಂತೆ ದಾಳಿ ನಡೆದಿತ್ತು.ಒಟ್ಟು 1300 ಕ್ಕೂ ಹೆಚ್ಚು ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ ಹಿನ್ನೆಲೆಯಲ್ಲಿ ಇದೀಗ ಮುಂದುವರೆದ ಭಾಗ ಎನ್ನುವಂತೆ ಗಡಿಪಾರು ಪ್ಲ್ಯಾನ್ ಮಾಡಿದ್ದಾರೆ.

ಸುಮಾರು 15ಕ್ಕೂ ಹೆಚ್ಚು ರೌಡಿಗಳು 50ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈ ಹಿನ್ನೆಲೆ ಪಾಲಿಕೆ ಚುನಾವಣೆಗೂ ತಯಾರಿ ಮಾಡಿಕೊಂಡಿದ್ದ ರೌಡಿ ಗಳಿಗೆ ಪೊಲೀಸ್ ಕಮೀಷನರ್ ಬಿಗ್ ಶಾಕ್ ನೀಡಿ ದ್ದಾರೆ.


ಇನ್ನೂ ಕಳೆದ ಒಂದೂವರೆ ವರ್ಷಗಳಿಂದ ದಿನಗ ಳಿಂದ ನಿರೀಕ್ಷೆಯಲ್ಲಿಯಲ್ಲಿದ್ದ ಉಳಿದಿದ್ದ ಹು-ಧಾ ಮಹಾನಗರ ಪಾಲಿಕೆ ಚುನಾವಣೆಗೆ ಈಗ ಕಾಲ ಸನ್ನಿಹಿತವಾಗುತ್ತಿದೆ. ಈ ನಿಟ್ಟಿನಲ್ಲಿ ಹು-ಧಾ ಪೊಲೀಸ್ ಕಮೀಷನರೇಟ್ ಕೂಡ ಹಲವಾರು ಸಿದ್ಧತೆ ಮಾಡುತ್ತಿದ್ದಾರೆ.

ಇನ್ನೂ ಚುನಾವಣೆಗೆ ತಯಾರಿ ನಡೆಸಿದ ಬೆನ್ನಲ್ಲೇ ಪೊಲೀಸ್ ಕಮೀಷನರ್ ರಿಂದ ಗಡಿಪಾರು ಪ್ಲ್ಯಾನ್ ಮಾಡಿದ್ದು ಅಕ್ರಮ ಚಟುವಟಿಕೆ ಸೇರಿದಂತೆ ಕೊಲೆ ಗ್ಯಾಂಬ್ಲಿಂಗ್ ನಲ್ಲಿ ತೊಡಗಿರುವ ರೌಡಿಗಳಿಗೆ ಶಾಕ್ ನೀಡಿ ಚುನಾವಣೆ ಸನಿಹವಾಗುತ್ತಿದ್ದಂತೆ ಗಡಿಪಾರು ಮಾಡಲಿದ್ದಾರೆ.
