ಬೆಲೆ ಏರಿಕೆ ವಿರುದ್ಧ ಅದರಗುಂಚಿ ಯಲ್ಲಿ ಕಾಂಗ್ರೆಸ್ ಪಕ್ಷದ ಪ್ರತಿಭಟನೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ…..

Suddi Sante Desk

ಕುಂದಗೋಳ –

ತೈಲ ಬೆಲೆ ಏರಿಕೆಯ ವಿರುದ್ದ ರಾಜ್ಯವ್ಯಾಪಿ ಕೈ ಪಕ್ಷದವರು ಕರೆ ನೀಡಿರುವ ಪ್ರತಿಭಟನೆ ಗೆ ಧಾರವಾಡ ಜಿಲ್ಲೆಯಲ್ಲೂ ಅಭೂತಪೂರ್ವ ಬೆಂಬಲ ಕಂಡು ಬಂದಿದೆ.

ಇಂದು ಅದರಗುಂಚಿ ಗ್ರಾಮದ ಪೆಟ್ರೋಲ್ ಬಂಕ್ ಹತ್ತಿರ ಕಾಂಗ್ರೆಸ್ ಪಕ್ಷದ ವತಿಯಿಂದ ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳ ಲಾಗಿತ್ತು ಪ್ರತಿಭಟನೆಯಲ್ಲಿ ದ್ವಿಚಕ್ರವಾಹನವನ್ನು ಕೆಳಗೆ ಮಲಗಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಯಿತು.

ಈ ಪ್ರತಿಭಟನೆಯನ್ನು ಉದ್ದೇಶಿಸಿ ಮುತ್ತಣ್ಣ ಶಿವಳ್ಳಿ ಹಾಗೂ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರು ಮಾತನಾಡಿ ದರು ಇದೇ ಸಂದರ್ಭದಲ್ಲಿ ಕಿಸಾನ್ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರಾದ ಮುತ್ತಣ್ಣ ಶಿವಳ್ಳಿ ಮಂಜುನಾಥ್ ರೆಡ್ಡಿ, ಗೋವಿಂದ ಸೊಟ್ಟನವರ್ ದೇವೇಂದ್ರಗೌಡ ಧರ್ಮ, ಗೌಡ್ರು ಪ್ರಮೋದಗೌಡ್ರ ಪಾಟೀಲ್, ರವಿ ವಾಳದ,ಜಾವಿದ ಮಲಂಗನ ವರ್,ಸುನೀಲ ತರ್ಲಘಟ್ಟ, ರಮೇಶ್ ಸೂಮಕ್ಕ ನವರ, ಗಿರೀಶ್ ಮುದಿಗೌಡ್ರು,ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಭಾಗವಹಿ ಸಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.