ಹುಬ್ಬಳ್ಳಿ –
ಕೇಬಲ್ ಸಮಸ್ಯೆ ಕುರಿತಂತೆ ಸಭೆ ಮಾಡಿದ ಪಾಲಿಕೆಯ ಆಯುಕ್ತರು – ವಿವಿಧ ಖಾಸಗಿ ಕಂಪನಿಗಳೊಂದಿಗೆ ಸಭೆ ಮಾಡಿ ಕೇಬಲ್ ಅಳವಡಿಸಿರುವ ಮಾಹಿತಿ ನೀಡುವಂತೆ ಸೂಚನೆ ನೀಡಿದ ಆಯುಕ್ತರು ಹೌದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಅಳವಡಿ ಸಲಾಗಿರುವ ಭೂಗತ ಕೇಬಲ್ ಗಳ ಕುರಿತಂತೆ ಪಾಲಿಕೆಯ ಆಯುಕ್ತರಾಗಿರುವ ಡಾ ಈಶ್ವರ ಉಳ್ಳಾಗಡ್ಡಿ ಯವರು ಸಭೆಯನ್ನು ಮಾಡಿದರು.
ಆಯುಕ್ತರು ಹುಬ್ಬಳ್ಳಿಯಲ್ಲಿನ ಮಹಾನಗರ ಪಾಲಿಕೆಯ ಸಭಾಭವನದಲ್ಲಿ ವಿವಿಧ ಖಾಸಗಿ ಕಂಪನಿಗಳ ಸ್ಥಳೀಯ ಮುಖ್ಯಸ್ಥರೊಂದಿಗೆ ಸಭೆ ಯನ್ನು ಮಾಡಿದರು.ಪ್ರಮುಖವಾಗಿ ಅವಳಿ ನಗರದ ರಸ್ತೆ ಮಾರ್ಗಗಳಲ್ಲಿ ಅಳವಡಿಸುತ್ತಿರುವ ಭೂಗತ ಕೇಬಲ್, ಗ್ಯಾಸ್ ಪೈಪ್ ಲೈನ್, ಮತ್ತು ಕೇಬಲ್ ಗಳ ಕುರಿತು ಸಬೆ ಮಾಡಿದರು. ಪ್ರಮುಖವಾಗಿ ಈ ಒಂದು ಸಭೆಯಲ್ಲಿ ಭಾರತೀಯಎರಟೆಲ್,ಬಿಎಸ್ಎನ್ಎಲ್,ಜಿಯೋ,ಅದಾನಿ,ವೊಡಾಫೋನ್ ವಿವಿಧ ಖಾಸಗಿ ಕಂಪನಿಯವರು ಉಪಸ್ಥಿತರಿದ್ದರು
ಆಯುಕ್ತರಾದ ಡಾ ಈಶ್ವರ ಉಳ್ಳಾಗಡ್ಡಿ ರವರು ಮಾತನಾಡಿ ಇಲ್ಲಿಯವರೆಗೆ ಒಟ್ಟು ಕೇಬಲ್, ಗ್ಯಾಸ್ ಪೈಪ್ ಲೈನ್,ಭೂಗತ ಕೇಬಲ್ ಹಾಕಿರು ವಂತಹ ವಿವರಗಳನ್ನು ಲಿಖಿತವಾಗಿ ಪಾಲಿಕೆಗೆ ಕೊಡಲು ಸೂಚಿಸಿದರು.ಆದೇಶದಂತೆ ಸೋಮ ವಾರದವರೆಗೆ ವಿವರಗಳನ್ನು ಸಲ್ಲಿಸಲಾಗುವುದು ಎಂದು ಕಂಪನಿಯವರು ತಿಳಿಸಿದರು.ಅದರಂತೆ ತಾವು ನೀಡಿದ ಮಾಹಿತಿಯನ್ನು ವಲಯ ಸಹಾಯಕ ಆಯುಕ್ತರಿಗೆ ಕಳುಹಿಸಿ ಪರಿಶೀಲಿ ಸುವಂತೆ ತಿಳಿಸಿ ಅವರು ಪರಿಶೀಲಿಸಿ ನೀಡಿದ ಒಟ್ಟು ಅಳತೆಯಂತೆ ಡಿಮ್ಯಾಂಡ್ ಜನರೇಟ್ ಮಾಡಿ ಅದರಂತೆ ತೆರಿಗೆ ತುಂಬಲಿಕ್ಕೆ ನೋಟೀಸ್ ನೀಡಲು ಕಟ್ಟುನಿಟ್ಟಾಗಿ ಆದೇಶಿಸಿದರು
ಹಾಗೂ ತಾವುಗಳು ಪಾಲಿಕೆಗೆ ತುಂಬದೇ ಬಾಕಿ ಇರುವ ಭೂಗತ ಕೇಬಲ್ ಗ್ಯಾಸ್ ಪೈಪ್ ಲೈನ್ ಹಾಗೂ ಕೇಬಲ್ ತೆರಿಗೆಯನ್ನು ತಕ್ಷಣ ಪಾವತಿಸು ವಂತೆ ಹಾಗೂ ಪಾವತಿಸದೇ ಇದ್ದಲ್ಲಿ ಸೀಜ್ ಮಾಡಲಾಗುವುದೆಂದು ಎಚ್ಚರಿಕೆಯನ್ನು ನೀಡಿ ದರು.
ಆಯುಕ್ತರೊಂದಿಗೆ ಈ ಒಂದು ಸಭೆ ಯಲ್ಲಿ ಪಾಲಿಕೆಯ ಅಧಿಕಾರಿಗಳಾದ ಚಿದಾನಂದ ಸ್ವಾಮಿ ಇ ತಿಮ್ಮಪ್ಪ,ವಿಠಲ್ ತುಬಾಕೆ ಕಾ.ನಿ.ಅ ಗಣಾಚಾರಿ ಕಾ. ನಿ. ಅ ( ವಿ) ಹಾಗೂ ಪಾಲಿಕೆಯ ಅಧಿಕಾರಿ ಗಳು ಉಪಸ್ಥಿತರಿದ್ದರು
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ….