ಹುಬ್ಬಳ್ಳಿ –
ಹುಬ್ಬಳ್ಳಿಯ ಹಳೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಭೆಯ ಮಾಸ್ಟರ್ ಮೈಂಡ್ ವಾಸಿಂ ಪಠಾಣ್ ನನ್ನು ನಿನ್ನೇಯಷ್ಟೇ ಬಂಧಿಸಲಾ ಗಿತ್ತು ನಂತರ ನ್ಯಾಯಾಧೀಶರ ಎದುರು ಬಂಧಿತರಾದ ಮೌಲ್ವಿ ವಾಸಿಂ ಪಠಾಣ್‌ನನ್ನು ಹಾಜರು ಪಡಿಸಲಾಗಿತ್ತು ಹೆಚ್ಚಿನ ವಿಚಾರಣೆ ಮಾಡಲು ಪೊಲೀಸರು ಹತ್ತು ದಿನಗಳ ಕಾಲ ಸಮಯವಕಾಶವನ್ನು ಕೇಳಿದ್ದರು ಆದರೆ ನ್ಯಾಯಾ ಲಯ ಐದು ದಿನಗಳ ಮಾತ್ರ ಪೊಲೀಸ್ ವಶಕ್ಕೆ ನೀಡಿದೆ. 4ನೇ ಜೆಎಂಎಫ್‌ಸಿ ನ್ಯಾಯಾಲಯ ಮೌಲ್ವಿ ವಾಸಿಂ ಪಠಾಣ್‌ನನ್ನು ಐದು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ.

ಮೌಲ್ವಿಯನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.ಇನ್ನೂ ಕಳೆದ ಶನಿವಾರ ರಾತ್ರಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆಗೆ ಮೌಲ್ವಿಯೇ ಮಾಸ್ಟರ್ ಮೈಂಡ್ ಎಂದು ಶಂಕಿಸಲಾಗಿದೆ. ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಮೌಲ್ವಿ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.ಗುರುವಾರ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ ಮೌಲ್ವಿ ವಾಸಿಂ ಪಠಾಣ್,ರೌಡಿ ಶೀಟರ್ ತುಫೈಲ್ ಮುಲ್ಲಾ ಸೇರಿದಂತೆ 3 ಆರೋಪಿಗಳನ್ನು ಐದು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಲಾಗಿದೆ. ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 134 ಆರೋಪಿಗಳನ್ನು ಬಂಧಿಸಲಾಗಿದೆ.
ಪೊಲೀಸ್ ಠಾಣೆ ಮುಂಭಾಗದಲ್ಲಿ ವಾಹನದ ಮೇಲೆ ಹತ್ತಿನಿಂತು ಮೌಲ್ವಿ ಗಲಭೆಗೆ ಪ್ರಚೋದನೆ ನೀಡಿದ್ದಾರೆ ಎಂಬುದು ಆರೋಪ.ಈ ಕುರಿತು ವಿಡಿಯೋ ವೈರಲ್ ಆಗಿತ್ತು.ಇನ್ನೂ ಅಭಿಷೇಕ್ ಹಿರೇಮಠ ಎಡಿಟ್ ಮಾಡಿದ ಫೋಟೋವನ್ನು ವಾಟ್ಸಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದು ಗಲಭೆಗೆ ಕಾರಣವಾಯಿತು.ಆರೋಪಿ ಬಂಧಿಸುವಂತೆ ಒಂದು ಕೋವಿನ ಜನರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮುಂದೆ ಜಮಾವಣೆಗೊಂಡಿದ್ದರು.ಆಗ ಪೊಲೀಸರ ಜೊತೆ ವಾಗ್ವಾದ ನಡೆಸಿದ್ದರು.ಭಾರೀ ಸಂಖ್ಯೆಯ ಜನರು ಗುಂಪು ಸೇರಿದಾಗ ಗಲಭೆ ಆರಂಭವಾಗಿತ್ತು.ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಯಿತು.12 ಪೊಲೀಸ್ ಸಿಬ್ಬಂದಿ ಗಾಯಗೊಂಡರು.ಬಳಿಕ ಆಸ್ಪತ್ರೆ ಆಂಜನೇಯ ದೇವಾಲ ಯಗಳ ಮೇಲೆ ಸಹ ಕಲ್ಲು ತೂರಾಟ ಮಾಡಲಾಯಿತು. ಪೊಲೀಸ್ ಠಾಣೆ ಮುಂಭಾಗದಲ್ಲಿ ವಾಹನದ ಮೇಲೆ ಹತ್ತಿನಿಂತು ಮೌಲ್ವಿ ಗಲಭೆಗೆ ಪ್ರಚೋದನೆ ನೀಡಿದ್ದಾರೆ ಎಂಬುದು ಆರೋಪ. ಈ ಕುರಿತು ವಿಡಿಯೋ ವೈರಲ್ ಆಗಿತ್ತು.