ಧಾರವಾಡ –
ಜನೇವರಿ 30 ರಂದು ಉತ್ತರ ಕನ್ನಡದ ಮಾಸ್ತಿಕಟ್ಟಾ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಧಾರವಾಡ ದ ಕೃಷಿ ವಿಶ್ವ ವಿದ್ಯಾಲಯದ ಇಬ್ಬರು ಮಹಿಳಾ ನೌಕರರು ಸಾವಿಗೀಡಾಗಿದ್ದರು.

ಇವರೊಂದಿಗೆ ಕಾರಿನಲ್ಲಿದ್ದ ಕುಲಪತಿಗಳ ಆಪ್ತ ಸಹಾ ಯಕ ಎಂ ಎ ಮುಲ್ಲಾ ಮತ್ತು ಶೀಘ್ರ ಲಿಪಿಕಾರ ಉಳ ವಪ್ಪ ಮೇಸ್ತ್ರಿ ಪ್ರಯಾಣಿಸುತ್ತಿದ್ದು ಗಾಯಗೊಂಡಿದ್ದ ರು.

ಈ ಒಂದು ಘಟನೆ ನಡೆದ ನಂತರ ಕೆಲ ಹಿಂದೂ ಪರ ಸಂಘಟನೆ ದಲಿತ ಪರ ಸಂಘಟನೆ ಜಯಕರ್ನಾಟಕ ಸಂಘಟನೆ ಹಾಗೂ ಬಸವರಾಜ ಕೊರವರ ನೇತ್ರತ್ವ ದಲ್ಲಿ ಈ ಒಂದು ಪ್ರಕರಣ ಕುರಿತಂತೆ ಸಂಶಯವನ್ನು ವ್ಯಕ್ತಪಡಿಸಿ ಪ್ರಕರಣವನ್ನು ಸಿಐಡಿ ಗೆ ವಹಿಸುವಂತೆ ಒತ್ತಾಯವನ್ನು ಮಾಡಿದ್ದರು.

ಅಲ್ಲದೇ ಇದೊಂದು ಕೊಲೆ ಪ್ರಕರಣವಾಗಿದ್ದು ಸೂಕ್ತ ವಾದ ತನಿಖೆಯನ್ನು ಮಾಡುವಂತೆ ಒತ್ತಾಯಿಸಿದ್ದ ರು.ಇವೆಲ್ಲದರ ನಡುವೆ ಸಧ್ಯ ಈ ಒಂದು ಅಪಘಾತ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.ಹೌದು ಅಪಘಾತದಲ್ಲಿ ಸಾವಿಗೀಡಾದ ಇಬ್ಬರು ಯುವತಿ ಯರಿಗೆ ಲೈಂಗಿಕ ಕಿರುಕುಳವನ್ನು ನೀಡಲಾಗಿದೆ ಇದೊಂದು ಕೊಲೆ ಪ್ರಕರಣ ಎಂದು ಮೃತರಾದ ಇಬ್ಬ ರು ಯುವತಿಯ ಪೋಸಕರು ದೂರು ನೀಡಿದ್ದಾರೆ.

ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಇಬ್ಬರು ಯುವತಿಯರನ್ನು ಕರೆದುಕೊಂಡು ಹೋಗಿ ದ್ದ ಆಪ್ತ ಸಹಾಯಕ ಮತ್ತು ಶೀಘ್ರ ಲಿಪಿಕಾರನ ಮೇಲೆ ದೂರು ದಾಖಲಾಗಿದೆ.




ಅಪಘಾತದಲ್ಲಿ ಮೈಘನಾ ಸಿಂಗನಾಥ ಮತ್ತು ರೇಖಾ ಕೊಕಟನೂರ ಮೃತಪಟ್ಟಿದ್ದರು.ಇವರಿಬ್ಬರು ಹೊರ ಗುತ್ತಿಗೆಯಯ ನೌಕರರಾಗಿದ್ದು ಕ್ರಿಯೇಟಿವ್ ಏಜೆನ್ಸಿ ಮೂಲಕ ನೇಮಕವಾಗಿದ್ದರು.2020 ಫೆಬ್ರು ವರಿ ತಿಂಗಳಲ್ಲಿ ನೇಮಕಗೊಂಡಿದ್ದರು.ಇಬ್ಬರು ಯು ವತಿಯರಿಗೆ ಕಚೇರಿಯ ಕೆಲಸದ ನಿಮಿತ್ಯ ಬಾಗಲ ಕೋಟೆಗೆ ಅಂತಾ ಹೇಳಿ ಗೋವಾ ಗೆ ಕರೆದುಕೊಂಡು ಹೋಗಿದ್ದು ಲೈಂಗಿಕ ಕಿರುಕುಳ ನೀಡಿದ್ದರು.ಅಲ್ಲದೇ ಗೋವಾದಲ್ಲಿ ಇಬ್ಬರು ಯುವತಿಯರ ಮೇಲೆ ಆಪ್ತ ಸಹಾಯಕ ಮತ್ತು ಶೀಘ್ರ ಲಿಪಿಗಾರ ಇಬ್ಬರು ಅತ್ಯಾ ಚಾರವೆಸಗಿದ್ದರು. ನಂತರ ಘಟನೆಯನ್ನು

ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದರಂತೆ ಮೇಘನಾ ಪೊಷಕರು ಆರೋಪಿಸಿ ಈಗ ಧಾರವಾ ಡದ ಉಪನಗರ ಪೊಲೀಸ್ ಠಾಣೆ ದೂರನ್ನು ನೀಡಿ ದ್ದಾರೆ.ಮೂರು ಪುಟಗಳ ವಿವರವಾದ ಮಾಹಿತಿಯ ನ್ನು ಬರೆದು ಇಬ್ಬರ ಮೇಲೆ ದೂರನ್ನು ದಾಖಲು ಮಾಡಿದ್ದಾರೆ.ಕೆಲಸಕ್ಕೆ ಸೇರಿದ ದಿನದಿಂದ ಮಕ್ಕಳು ಏನೇಲ್ಲಾ ನೋವುಗಳನ್ನು ಅನುಭವಿಸಿದ್ದಾ ರೆ ಎಂಬ ಕುರಿತಂತೆ ದೂರಿನಲ್ಲಿ ಉಲ್ಲೇಖ ಮಾಡಿ ಪ್ರಕರಣ ವನ್ನು ದಾಖಲು ಮಾಡಿದ್ದಾರೆ.ಇನ್ನೂ ಇಬ್ಬರು ಯುವತಿಯರ ಪೊಷಕರು ನೀಡಿದ ದೂರಿನ ಹಿನ್ನಲೆಯಲ್ಲಿ ಸಧ್ಯ ಧಾರವಾಡದ ಉಪನಗರ ಪೊಲೀಸರು ದೂರನ್ನುದಾಖಲುಮಾಡಿಕೊಂಡಿದ್ದು ಮುಂದಿನ ಕ್ರಮವನ್ನುಕೈಗೊಂಡಿದ್ದಾರೆ.