ಗುಬ್ಬಿ –
ರಾಷ್ಟ್ರೀಯ ಹೆದ್ದಾರಿ 73ರ ಹೇರೂರಿನ ಬಳಿ ವೇಗವಾಗಿ ಬಂದ ಕಾರು ಗುದ್ದಿದ ಪರಿಣಾಮ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ಹೊನ್ನಶೆಟ್ಟಿಹಳ್ಳಿ ಸರ್ಕಾರಿ ಶಾಲೆ ಶಿಕ್ಷಕಿ, ಪಟ್ಟಣದ ನಿವಾಸಿ ಜಯಂತಿಮಾಲ (58) ಮೃತಪಟ್ಟಿ ದ್ದಾರೆ.ತುಮಕೂರು ಕಡೆಯಿಂದ ವೇಗವಾಗಿ ಬಂದ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ
ಪರಿಣಾಮ ಶಿಕ್ಷಕಿ ರಸ್ತೆಗೆ ಬಿದ್ದರು.ತಲೆಗೆ ತೀವ್ರವಾಗಿ ಪೆಟ್ಟಾಗಿದ್ದ ಅವರು, ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟರು.ಮೃತರಿಗೆ ಪತಿ, ಪುತ್ರ ಹಾಗೂ ಪುತ್ರಿ ಇದ್ದಾರೆ.ಶಿಕ್ಷಕಿಯ ನಿಧನಕ್ಕೆ ತಾಲ್ಲೂಕಿನ ಜಿಲ್ಲೆಯ ಮತ್ತು ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳುಂ ಸಂತಾಪವನ್ನು ಸೂಚಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಗುಬ್ಬಿ.