ಬೆಳಗಾವಿ –
ಬೆಳಗಾವಿಯ ಲೋಕಸಭೆ ಉಪಚುನಾವಣೆ ಗೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಯಮಕನ ಮರಡಿ ಪೊಲೀಸ್ ಠಾಣೆ ASI ಜೆ.ಬಿ ಪೂಜಾರ(57) ಅವರು ಘಟಪ್ರಭಾ ಮತಗಟ್ಟೆ ಕೇಂದ್ರದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಬೆಳಗಾವಿಯ ಲೋಕ ಸಭಾ ಉಪಚುನಾವಣೆ ಯ ಕರ್ತವ್ಯಕ್ಕೆಂದು ಪೂಜಾರ ಅವರನ್ನು ಗೋಕಾಕ ಮತ ಕ್ಷೇತ್ರದ ಘಟಪ್ರಭಾ ದ ಮತಗಟ್ಟೆ ಕೇಂದ್ರಕ್ಕೆ ಸೆಕ್ಟರ್ ಅಧಿಕಾರಿಯಾಗಿ ನಿಯೋಜಿಸಲಾಗಿತ್ತು. ಘಟಪ್ರಭಾ ದ ಎಸ್‌ಬಿಟಿ ಪಿಯು ಕಾಲೇಜಿನ ಶೌಚಾಲಯದ ಆವರಣದಲ್ಲಿ ಎಎಸ್‌ಐ ಜೆ.ಬಿ ಪೂಜಾರ ಅವರು ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಮೃತಪ ಟ್ಟಿದ್ದಾರೆ