ಮಂಗಳೂರು –
ಸರಕಾರದ ಅವೈಜ್ಞಾನಿಕ ಶಿಕ್ಷಣ ನೀತಿ ಮತ್ತು ನ್ಯಾಯಾಲಯದ ತೀರ್ಪನ್ನು ಪಾಲಿಸದೆ 5 ಹಾಗೂ 8ನೇ ತರಗತಿಗಳ ಪಬ್ಲಿಕ್ ಪರೀಕ್ಷೆಗಳ ಬಗ್ಗೆ ಪೋಷಕರು,ವಿದ್ಯಾರ್ಥಿಗಳಲ್ಲಿ ಗೊಂದಲವನ್ನುಂ ಟು ಮಾಡುತ್ತಿರುವ ಶಿಕ್ಷಣ ಸಚಿವರ ರಾಜೀನಾ ಮೆಗೆ ಎಐವೈಎಫ್ ಆಗ್ರಹಿಸಿದೆ.
ರಾಜ್ಯದ 5 ಮತ್ತು 8ನೇ ತರಗತಿಯ ವಿದ್ಯಾರ್ಥಿ ಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು 2022ರಂದು ಹೊರಡಿಸಿದ್ದ ಆದೇಶವು ನಿಯಮಬಾಹಿರವೆಂದು ತಿಳಿಸಿದ್ದ ರಾಜ್ಯ ಹೈಕೋರ್ಟ್ ಇದನ್ನು ರದ್ದುಗೊಳಿ ಸುವಂತೆ ಆದೇಶಿತ್ತು ಈ ಆದೇಶದ ವಿರುದ್ಧ ಸರಕಾರವು ಮತ್ತೆ ನ್ಯಾಯಾಲಯದ ಮೆಟ್ಟಲೇ ರಿತ್ತು.ಆದಾಗ್ಯೂ ಹೈಕೋರ್ಟ್ ಈ ಮೇಲ್ಮನವಿ ಯನ್ನು ತಿರಸ್ಕರಿಸಿದೆ.
ಹಾಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಗೊಂದಲ ಸೃಷ್ಟಿಸುತ್ತಿ ರುವ ಸಚಿವ ನಾಗೇಶ್ ರಾಜೀನಾಮೆ ಸಲ್ಲಿಸ ಬೇಕು ಎಂದು ಅಖಿಲ ಭಾರತ ಯುವಜನ ಫೆಡರೇಶನ್ (ಎಐವೈಎಫ್)ನ ದ.ಕ.ಜಿಲ್ಲಾ ಸಮಿತಿಯ ಅಧ್ಯಕ್ಷ ಪುಷ್ಪರಾಜ್ ಬೋಳೂರು ಮತ್ತು ಕಾರ್ಯದರ್ಶಿ ಜಗತ್‌ಪಾಲ್ ಕೋಡಿಕಲ್ ಆಗ್ರಹಿಸಿದ್ದಾರೆ.
ಇದರೊಂದಿಗೆ ಶಿಕ್ಷಕರ ವರ್ಗಾವಣೆ ವಿಚಾರದಲ್ಲೂ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಅವೈಜ್ಞಾನಿಕ ವಿಧಾನಗಳನ್ನು ಮಾಡಿ ನಿಲ್ಲಿಸಿದ್ದಾರೆ ಹೀಗಾಗಿ ಈ ಒಂದು ಪರಿಸ್ಥಿತಿ ಯಿಂದಾಗಿ ಸಾಕಷ್ಟು ಶಿಕ್ಷಕರು ಪರದಾಡುತ್ತಿದ್ದಾರೆ ಇದರಿಂದಾಗಿ ಸಚಿವರು ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.
ಸುದ್ದಿ ಸಂತೆ ನ್ಯೂಸ್ ಮಂಗಳೂರು…..