ಬೆಂಗಳೂರು –
ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಈಗಾಗಲೇ ಸಾಕಷ್ಟು ವಿವಾದಕ್ಕೆ ಕಾರಣವಾಗಿರೋ ಶಿಕ್ಷಣ ಇಲಾಖೆ ಈಗ ಮತ್ತೊಂದು ಯಡವಟ್ಟು ಮಾಡ್ಕೊಂಡು ನಂತ್ರ ಅದನ್ನ ಸರಿ ಮಾಡ್ಕೊಂಡಿದೆ.ಹೌದು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ʻಏಕ್ ಭಾರತ್, ಶ್ರೇಷ್ಠ ಭಾರತ್ ಅನ್ನೋ ಕಾರ್ಯಕ್ರಮದಡಿ ಪ್ರೌಢಶಾಲೆ ಮತ್ತು ಪಿಯು ವಿಧ್ಯಾರ್ಥಿಗಳಿಗೆ ಹೊರ ರಾಜ್ಯಗಳಿಗೆ ಪ್ರವಾಸಕ್ಕೆ ಕರೆದು ಕೊಂಡು ಹೋಗುವ ಯೋಜನೆಯನ್ನ ಹಮ್ಮಿಕೊಂಡಿತ್ತು ಆದ್ರೆ ಇದ್ರಲ್ಲಿ ಹಿಂದಿ ಭಾಷೆ ಬರುವ ಮತ್ತು ತಂತ್ರಜ್ಞಾನ ತಿಳುವಳಿಕೆ ಇರುವ ಮಕ್ಕಳಿಗೆ ಮಾತ್ರ ಅವಕಾಶ ಕಲ್ಪಿಸಲಾ ಗಿದೆ ಅಂತ ಸುತ್ತೋಲೆ ಹೊರಡಿಸಿ ಬಿಟ್ಟಿತ್ತು.
ಸರ್ಕಾರದ ಈ ನಡೆ ಈಗ ಸಾಕಷ್ಟು ವಿವಾದಕ್ಕೆ ಕಾರಣವಾಗಿ ಹಲವಾರು ಜನ ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದ್ರು. ಆದ್ರೆ ನಂತ್ರ ಇದಕ್ಕೆ ಸ್ಪಷ್ಟೀಕರಣ ನೀಡಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್,ಕೇವಲ ಹಿಂದಿ ಮತ್ತು ಇಂಗ್ಲಿಷ್ ಬರುವ ವಿದ್ಯಾರ್ಥಿಗಳನ್ನ ಮಾತ್ರ ಸೆಲೆಕ್ಟ್ ಮಾಡೋಕೆ ಹೇಳಿಲ್ಲ. ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಈ ರೀತಿಯಾವುದೇ ನಿಯಮ ಇಲ್ಲ.ಈ ಗೊಂದಲಕ್ಕೆ ಕಾರಣವಾದ ಅಧಿಕಾರಿ ವಿರುದ್ಧ ಇಲಾಖೆಯಿಂದ ಶಿಸ್ತು ಕ್ರಮ ಕೈಗೊಳ್ಳಲಾಗುತ್ತೆ ಅಂತ ಟ್ವೀಟ್ ಮಾಡಿದ್ದಾರೆ.ಸದ್ಯಕ್ಕೆ ವಿವಾದ ತಣ್ಣಗಾಗಿದೆ.