ಬೆಂಗಳೂರು –
ಮೇ 16 ಶಾಲೆಗಳು ಆರಂಭವಾಗಲಿದ್ದು ಅಂದೇ ಅಂದರೆ ಮೇ 16 ರಿಂದ 20ರವರೆಗೆ ನಾಲ್ಕು ದಿನಗಳ ಕಾಲ ಮೊದಲು ಶಾಲೆಗಳ ದಾಖಲಾತಿ ಆಂದೋಲನ ನಡೆಯ ಲಿದ್ದು ಈ ಒಂದು ಕುರಿತು ಇಲಾಖೆಯ ಅಧಿಕಾರಿಗಳು ರಾಜ್ಯದ ಶಾಲೆಗಳ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.
ಹೌದು ಕಳೆದ ಎರಡು ವರ್ಷ ಶಾಲೆಗಳು ಭೌತಿಕವಾಗಿ ನಡೆಯದಿರುವುದು ಮತ್ತು ಮಕ್ಕಳು ನಿರಂತರ ಹಾಜರಾಗ ದಿರುವುದರಿಂದ ದಾಖಲಾತಿ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ.ಹೀಗಾಗಿ ಶಿಕ್ಷಕರು ಮನೆ ಮನೆಗೆ ತೆರಳಿ ಮಕ್ಕ ಳನ್ನು ಶಾಲೆಗೆ ಕಳುಹಿಸಲು ಪೊಷಕರ ಮನವೊಲಿಸಬೇಕು. ಶಾಲೆ ಪ್ರಾರಂಭೋತ್ಸವದ ದಿನ ಮುಂಚೆ ಜಾಥಾ, ಘೋಷಣೆ,ಬಿತ್ತಿಪತ್ರ,ಕರಪತ್ರ ಹಂಚುವ ಕೆಲಸ ಮಾಡ ಬೇಕು ಎಂದು ತಿಳಿಸಿದ್ದು ಈ ಒಂದು ಕುರಿತು ಒಂದೆರಡು ದಿನಗಳಲ್ಲಿ ಅಧಿಕೃತವಾದ ಆದೇಶವೊಂದು ಬರಲಿದೆ