ಡೆಹರಾಡೂನ್ – ಪ್ರಕರಣವೊಂದರಲ್ಲಿ ಪ್ರಮುಖ ಆರೋಪಿಯಾಗಿದ್ದವರ ಐಷಾರಾಮಿ ಕಾರನ್ನು ಬಳಸಿ ಹೈಕೋರ್ಟ್ ನಿಂದ ಶಿಕ್ಷೆಗೆ ಒಳಗಾದ ಘಟನೆ ಉತ್ತರಾಖಂಡ ನಲ್ಲಿ ನಡೆದಿದೆ.ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಕೃಷ್ಣನ್ ಸಾಯಿನ್ ಎಂಬುವರ ಕಾರನ್ನು ಬಳಸಿ ಈಗ ಡೆಹರಾಡೂನ್ ಜಿಲ್ಲಾ ನ್ಯಾಯಾಧೀಶರೇ ಪೇಚಿಗೆ ಸಿಲುಕಿಕೊಂಡಿದ್ದಾರೆ.
ಕೃಷ್ಣನ್ ಸಾಯಿನ್ ಆರೋಪಿಯೊಬ್ಬರು ತಮ್ಮ ವಿರುದ್ಧ ದಾಖಲಾದ ಪ್ರಥಮ ಮಾಹಿತಿ ವರದಿಯನ್ನು ವಜಾಗೊಳಿಸಬೇಕು ಎಂಬ ಅರ್ಜಿಯನ್ನು ಹೈಕೋರ್ಟ್ ಮುಂದೆ ಸಲ್ಲಿಸಿದ್ದರು.ಅಲದೇ ಡೆಹರಾಡೂನ್ ಜಿಲ್ಲಾ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಾಕಿ ಇದ್ದ ಪ್ರಕರಣವೊಂದರ ಆರೋಪಿಯಾಗಿದ್ದ. ಹೀಗಾಗಿ ಇಷ್ಟೇಲ್ಲ ಆರೋಪ ಹೊತ್ತುಕೊಂಡ ಈ ಒಂದು ಆರೋಪಿಯ ಐಶಾರಾಮಿ ಕಾರನ್ನು ಜಿಲ್ಲಾ ನ್ಯಾಯಾಧೀಶರು ಬಳಸಿದ್ದರು. ಡೆಹರಾಡೂನ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಶಾಂತ್ ಜೋಶಿ ಮಸ್ಸೂರಿಯ ನ್ಯಾಯಾಲಯದ ತಮ್ಮ ಕರ್ತವ್ಯಕ್ಕೆ ಹಾಜರಾಗಲು ತಮಗೆ ನೀಡಲಾಗಿದ್ದ ಅಧಿಕೃತ ಇಲಾಖಾ ವಾಹನದಲ್ಲಿ ಹೋಗಬೇಕಿತ್ತು. ಆದರೆ, ಅವರು ಇದರ ಬದಲು ಆರೋಪಿ ನೀಡಿದ್ದ ಐಷಾರಾಮಿ ಆಡಿ ಕಾರನ್ನು ಬಳಸಿಕೊಂಡರು. ಪ್ರಾಥಮಿಕ ತನಿಖೆಯ ಬಳಿಕ, ಈ ಕಾರು ಕೇವಲ್ ಕೃಷ್ಣನ್ ಸಾಯಿನ್ ಅವರಿಗೆ ಸೇರಿದ್ದು ಎಂಬುದು ಬಯಲಾಯಿತು.
ಈತ ಡೆಹರಾಡೂನ್ ಜಿಲ್ಲಾ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಾಕಿ ಇದ್ದ ಪ್ರಕರಣವೊಂದರ ಆರೋಪಿಯಾಗಿದ್ದ. ಅಲ್ಲದೆ, ಈ ಆರೋಪಿ ಕೇವಲ್ ಕೃಷ್ಣನ್ ಸಾಯಿನ್ ತಮ್ಮ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ವಜಾಗೊಳಿಸುವಂತೆ ಮೇಲ್ಮನವಿ ಸಲ್ಲಿಸಿದ್ದ. ಇದನ್ನು ಗಂಭೀರವಾಗಿ ಪರಿಗಣಿಸಿ ಹೈಕೋರ್ಟ್ ಮರೆಯಲಾರದ ಶಿಕ್ಷೆಯನ್ನು ನೀಡಿದೆ.
ಆರೋಪಿಯೊಬ್ಬರ ಖಾಸಗಿ ವಾಹನವನ್ನು ತಮ್ಮ ವೈಯಕ್ತಿಕ ಉಪಯೋಗಕ್ಕೆ ಬಳಸಿಕೊಂಡ ಜಿಲ್ಲಾ ನ್ಯಾಯಾಧೀಶರೊಬ್ಬರನ್ನು ಹೈಕೋರ್ಟ್ ಅಮಾನತು ಮಾಡಿದೆ. ಈ ಪ್ರಕರಣ ನಡೆದಿರುವುದು ಉತ್ತರಾಖಂಡ ರಾಜ್ಯದಲ್ಲಿ.
ಡೆಹರಾಡೂನ್ ಜಿಲ್ಲಾ ನ್ಯಾಯಾಧೀಶರೊಬ್ಬರು ಈ ಪ್ರಕರಣದಲ್ಲಿ ಅಮಾನತ್ತಾಗಿದ್ದು, ನ್ಯಾಯಾಂಗವೇ ತಲೆತಗ್ಗಿಸುವಂತಾಗಿದೆ. ಜಿಲ್ಲಾ ನ್ಯಾಯಾಧೀಶರಾದ ಪ್ರಶಾಂತ್ ಜೋಷಿ ಅವರು ಅಮಾನತ್ತಾಗಿರುವ ವ್ಯಕ್ತಿ.
ಕಾರನ್ನು ಬಳಿಸಿಕೊಂಡಿದ್ದ ಆರೋಪಿತರಾಗಿರುವ ಜಿಲ್ಲಾ ನ್ಯಾಯಾಧೀಶರು ತಾವು ಬಳಿಸಿದ್ದ ಆಡಿ ಕಾರನ್ನು ನ್ಯಾಯಾಧೀಶರ ವಾಹನಕ್ಕೆ ಮೀಸಲಾಗಿದ್ದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದರು. ಇಂತಹ ವ್ಯಕ್ತಿಯೊಬ್ಬರು ನ್ಯಾಯಾಂಗ ಇಲಾಖೆಯ ಅಧಿಕಾರಿಯಾಗಿ ಮುಂದುವರಿಯಲು ಯಾವುದೇ ನೈತಿಕ ಹಕ್ಕಿಲ್ಲ ಎಂಬುದಾಗಿ ಅಮಾನತು ತೀರ್ಪು ಪ್ರಕಟಿಸಿದ ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.