ನ್ಯೂಜೆರ್ಸಿ –
ನಾಯಿ ಮನುಷ್ಯನ ಅತ್ಯುತ್ತಮ ಸ್ನೇಹಿತ ಎಂಬ ಮಾತು ಲೆಕ್ಕವಿಲ್ಲದಷ್ಟು ಬಾರಿ ಸಾಬೀತಾಗುತ್ತಲೇ ಬಂದಿದೆ. ಇಂಥಹ ಮಾತಿಗೆ ಮತ್ತೊಂದು ನಿದರ್ಶನದಲ್ಲಿ ಜರ್ಮನ್ ಶೆಫರ್ಡ್ ನಾಯಿಯೊಂದು ಹೃದಯಾಘಾತಕ್ಕೆ ಒಳಗಾಗಿದ್ದ ತನ್ನ ಮಾಲೀಕನ ಪ್ರಾಣ ರಕ್ಷಣೆ ಮಾಡಿದೆ.
ಸ್ಯಾಡಿ ಹೆಸರಿನ ನಾಯಿಯೊಂದು ತನ್ನ ಯಜಮಾನ ಬ್ರಿಯಾನ್‌ಗೆ ಹೃದಯಾಘಾತವಾಗುವುದನ್ನು ನೋಡುತ್ತಲೇ, ಆತನ ಹತ್ತಿರ ಓಡಿ ಬಂದು ಮುಖ ನೆಕ್ಕುವ ಮೂಲಕ ಪ್ರಜ್ಞೆಯಲ್ಲಿರುವಂತೆ ನೋಡಿಕೊಂಡಿದೆ. ಜೊತೆಗೆ ಬ್ರಯಾನ್‌ನನ್ನು ಆತನ ಫೋನ್‌ನತ್ತ ಎಳೆದುಕೊಂಡು ಬಂದು ತುರ್ತು ಸೇವಾ ಸಂಖ್ಯೆಗೆ ಕರೆ ಮಾಡಲು ಅನುವು ಮಾಡಿದೆ.
ಈ ಘಟನೆ ನ್ಯೂಜೆರ್ಸಿಯಲ್ಲಿ ಜರುಗಿದ್ದು, ಸ್ಯಾಡಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ಶ್ಲಾಘನೆಗಳು ಕೇಳಿ ಬಂದಿವೆ.