ಹುಬ್ಬಳ್ಳಿ –
ಕಾರು ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಒರ್ವ ಸಾವಿಗೀ ಡಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ

ಗಾಯಗೊಂಡ ಇಬ್ಬರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೌದು ಹುಬ್ಬಳ್ಳಿ ಹೊರವಲಯದ ಕುಸುಗಲ್ಲ್ ರಸ್ತೆಯಲ್ಲಿ ಈ ಒಂದು ಘಟನೆ ನಡೆದಿದೆ ಹುಬ್ಬಳ್ಳಿಯಿಂದ ನವಲಗುಂದ ಕಡೆಗೆ ಹೊರಟಿದ್ದ ಒಂದೇ ಬೈಕ್ ನಲ್ಲಿ ಹೊರಟಿದ್ದ ಮೂವರು

ನವಲಗುಂದ ಕಡೆಯಿಂದ ಹುಬ್ಬಳ್ಳಿಯ ಕಡೆಗೆ ಬರುತ್ತಿದ್ದ ಕಾರು ಬೈಕ್ ಗೆ ಡಿಕ್ಕಿಯಾಗಿದೆ.ಬೈಕ್ ನಲ್ಲಿ ದ್ದ ಒರ್ವ ಸ್ಥಳದಲ್ಲೇ ಸಾವಿಗೀಡಾದದ್ದು ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲು ಆಗಿದ್ದಾರೆ

ಬೈಕ್ ಗೆ ಕಾರು ಡಿಕ್ಕಿಯಾಗುತ್ತಿದ್ದಂತೆ ಕಾರು ಬಿಟ್ಟು ಎಸ್ಕೇಪ್ ಆಗಿದ್ದಾರೆ ಕಾರು ಚಾಲಕ.ಇನ್ನೂ ಸ್ಥಳಕ್ಕೆ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲು ಮಾಡಿ ಕೊಂಡು ಮುಂದಿನ ಕ್ರಮವನ್ನು ಕೈಗೊಂಡಿ ದ್ದಾರೆ ಪೊಲೀಸರು