ಅಮ್ಮಿನಬಾವಿ –
ಸ್ವೀಪ್ಟ್ ಡಿಜೈರ್ ಕಾರವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ತಾಲ್ಲೂಕಿನ ಅಮ್ಮಿನಬಾವಿ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ.
ಧಾರವಾಡ ತಾಲೂಕಿನ ಹಾರೋ ಬೆಳವಡಿ ಗ್ರಾಮದಿಂದ ರವಿ ಭಜಂತ್ರಿ ಎಂಬುವರು ಕಾರನ್ನು ತಗೆದುಕೊಂಡು ಧಾರವಾಡ ಕಡೆಗೆ ಹೊರಟಿದ್ದರು. ಬಾಡಿಗೆ ಇದೆ ಎಂದುಕೊಂಡು ವೇಗವಾಗಿ ಹೊರಟಿದ್ದರು.
ಚಾಕಲನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ರಸ್ತೆ ಪಕ್ಕದಲ್ಲಿ ಬಿದ್ದಿದೆ. ಅದೃಷ್ಟವಶಾತ್ ಕಾರು ಚಾಲಕ ರವಿ ಗಂಭೀರವಾಗಿ ಗಾಯಗೊಂಡು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಧ್ಯ ಗಾಯಾಳು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇನ್ನೂ ಚಾಲಕ ಅವಸರದಲ್ಲಿ ಹೊರಟು ನಿದ್ರೆಯಲ್ಲಿ ನಿಯಂತ್ರಣ ತಪ್ಪಿ ಹೀಗೆ ಆಗಿದ್ದು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.