ಬೆಂಗಳೂರು –
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್ ನೀಡಿದ ಶಿಕ್ಷಣ ಇಲಾಖೆ – ಫೆಬ್ರುವರಿ 13 ರಿಂದ ನಡೆಯಲಿದೆ ಬಡ್ತಿ ಕಾರ್ಯ ಹೌದು ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಬಡ್ತಿ 13ರಿಂದ ಪ್ರಕ್ರಿಯೆ ನಡೆಯಲಿದೆ.ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಂದ ಮುಖ್ಯ ಶಿಕ್ಷಕರ ಹುದ್ದೆಗೆ ಹಾಗೂ ಮುಖ್ಯ ಶಿಕ್ಷಕರ ಹುದ್ದೆಯಿಂದ ಹಿರಿಯ ಮುಖ್ಯ ಶಿಕ್ಷಕ ಹುದ್ದೆಗೆ ನಡೆಯಲಿದೆ.
ಫೆ. 13ರಿಂದ 26ರವರೆಗೆ ಕೌನ್ಸೆಲಿಂಗ್ ಮೂಲಕ ಬಡ್ತಿ ನೀಡಲು ಹೊಸ ವೇಳಾ ಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ.2023-24ನೇ ಸಾಲಿ ನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ‘ಸಿ’ ವೃಂದದ ಹುದ್ದೆಗಳಿಗೆ ಬಡ್ತಿ ನೀಡುವ ಸಂಬಂಧ ಕಳೆದ ತಿಂಗಳು ನಡೆಯಬೇಕಿದ್ದ ಕೌನ್ಸೆಲಿಂಗ್ ಪ್ರಕ್ರಿಯೆ ಯನ್ನು ಇಲಾಖೆಯು ಮುಂದೂಡಿತ್ತು.
ಹೊಸ ವೇಳಾಪಟ್ಟಿಯ ಪ್ರಕಾರ ಫೆ. 13 ರಂದು ಬಡ್ತಿಗೆ ಅಗತ್ಯವಿರುವ ಖಾಲಿ ಹುದ್ದೆಗಳನ್ನು ಜಿಲ್ಲಾ ಮಂಜೂರಾತಿ ಹುದ್ದೆಗಳಿಗೆ ಮೀರದಂತೆ ಕರ್ತವ್ಯ ನಿರತ ಹುದ್ದೆಗಳನ್ನು ಪರಿಗಣಿಸಿ ಅಂತಿಮವಾಗಿ ಬಡ್ತಿಗೆ ಪರಿಗಣಿಸಬೇಕಾದ ಖಾಲಿ ಹುದ್ದೆಗಳನ್ನು ಪ್ರಕಟಿಸಲಾಗುವುದು.
14ರಂದು ಅರ್ಹರ 1:2 ಅನುಪಾತದಲ್ಲಿ ಅಂತಿಮ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ ಪ್ರಕಟಣೆ, 16ರಂದು ಅಂತಿಮಪಟ್ಟಿಗೆ ಬಡ್ತಿ ಮೀಸಲು ಬಿಂದು ಮತ್ತು ರೋಸ್ಟರ್ ಬಿಂದು ಗುರುತಿ ಸುವುದು, 15ರಿಂದ 17ರವರೆಗೆ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ, 26ರಂದು ಮುಖ್ಯ ಶಿಕ್ಷಕ ಮತ್ತು ಹಿರಿಯ ಮುಖ್ಯ ಶಿಕ್ಷಕ ಹುದ್ದೆಗೆ ಕೌನ್ಸೆಲಿಂಗ್ ನಡೆಯಲಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..