ಬೆಂಗಳೂರು –
ಅಕ್ರಮ ನೇಮಕಾತಿಯ ತನಿಖೆ ಚುರುಕು ಗೊಂಡಿದ್ದು ಇತ್ತ ಬಂಧಿತ ಶಿಕ್ಷಕರು ಸೇವೆಯಿಂ ದಲೇ ವಜಾ ಮಾಡಲಾಗುತ್ತಿದೆ ಹೌದು 2012-13 ಹಾಗೂ 2014-15ನೇ ಸಾಲಿನಲ್ಲಿ ಅಕ್ರಮವಾಗಿ ಶಿಕ್ಷಕ ಹುದ್ದೆ ಪಡೆದವರು ರಾಜ್ಯ ತನಿಖಾ ದಳ (ಸಿಐಡಿ)ತನಿಖೆಯನ್ನು ಎದುರಿಸುವುದು ಮಾತ್ರ ವಲ್ಲ ಅವರನ್ನು ಸೇವೆಯಿಂದಲೇ ವಜಾಗೊಳಿ ಸುವ ಕಠಿಣ ನಿರ್ಧಾರಕ್ಕೆ ರಾಜ್ಯ ಬಂದಿದ್ದು ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಆದೇಶ ಹೊರಬೀಳ ಲಿದೆ.
ಇದುವರೆಗೆ ಅಕ್ರಮ ನೇಮಕಾತಿ ಹಗರಣ ಸಂಬಂಧ 41 ಶಿಕ್ಷಕರನ್ನು ಸಿಐಡಿ ಬಂಧಿಸಿದೆ. ಇನ್ನು ತನಿಖೆ ಪ್ರಗತಿಯಲ್ಲಿದ್ದು ಸುಮಾರು 100 ಕ್ಕೂ ಹೆಚ್ಚಿನ ಶಿಕ್ಷಕರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಬಹುದು ಎಂದು ಸಿಐಡಿ ಹೇಳು ತ್ತಿದೆ.ಈ ಅಕ್ರಮದಲ್ಲಿ ತೊಡಗಿದ ಶಿಕ್ಷಕರ ಮೇಲೆ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈಗ ಬಂಧಿತರಾಗಿರುವ ಶಿಕ್ಷಕರು ಕಾನೂನು ಬಾಹಿರವಾಗಿ ಸರ್ಕಾರಿ ಹುದ್ದೆ ಪಡೆದಿರುವುದು ತನಿಖೆಯಲ್ಲಿ ರುಜುವಾತಾಗಿದೆ.ಸರ್ಕಾರಕ್ಕೆ ಆರೋಪಿಗಳ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಶಿಫಾರಸು ಮಾಡಲಾಗಿದ್ದು ಅದರನ್ವಯ ಶಿಕ್ಷಕ ರನ್ನು ಸೇವೆಯಿಂದಲೇ ವಜಾಗೊಳಿಸಲು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದೆ.ಅಲ್ಲದೆ ಈ ಹಗರಣದ ಕುರಿತು ಶಿಕ್ಷಣ ಇಲಾಖೆ ಕೂಡಾ ಪ್ರತ್ಯೇಕವಾಗಿ ಇಲಾಖಾ ಮಟ್ಟದ ಆಂತರಿಕ ವಿಚಾರಣೆ ನಡೆಸಿದೆ ಎಂದು ಸಿಐಡಿ ಅಧಿಕಾರಿ ಗಳು ಹೇಳಿದ್ದಾರೆ.