ಬೆಂಗಳೂರು –
ರಾಜ್ಯದಲ್ಲಿನ ಶಿಕ್ಷಕರ ವರ್ಗಾವಣೆ ವಿಚಾರ ಕುರಿತಂತೆ ಕಾನೂನಿನ ತೊಡಕುಗಳು ಚುನಾವಣೆ ನೀತಿ ಸಂಹಿ ತೆ ಮೊದಲಾದ ಕಾರಣಗಳಿಂದ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಕೆಲವು ವರ್ಷಗಳಿಂದ ಸಮರ್ಪಕವಾಗಿ ನಡೆದಿಲ್ಲ ಈಗ ಅವೆಲ್ಲ ತೊಡಕುಗಳು ನಿವಾರಣೆಯಾಗಿದ್ದು ಶೀಘ್ರದಲ್ಲೇ ವರ್ಗಾವಣೆ ಆರಂಭವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ-2021ಅನ್ನು ಇತ್ತೀಚಿಗಷ್ಟೇ ರಾಜ್ಯ ಸರಕಾರ ಅನುಷ್ಠಾನಕ್ಕೆ ತಂದಿತ್ತು.ನಿಯಮ ರೂಪಿಸುವ ಸಂದರ್ಭದಲ್ಲಿ ಕಾಯ್ದೆಯಲ್ಲಿ ಇಲ್ಲದ ಅಂಶಗಳನ್ನು ಸೇರಿಸಿದ್ದಾರೆ ಎಂಬ ಕಾರಣಕ್ಕೆ ಶಿಕ್ಷಕರ ಲ್ಲಿ ಕೆಲವರು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂ ಡಳಿ(ಕೆಎಟಿ) ಮೆಟ್ಟಿಲೇರಿದ್ದರು.ಕೆಎಟಿ ಶಿಕ್ಷಕರ ಅರ್ಜಿ ಮಾನ್ಯ ಮಾಡಿತ್ತು.ಕೆಎಟಿ ಆದೇಶ ಪ್ರಶ್ನಿಸಿ ಸಾರ್ವಜ ನಿಕ ಶಿಕ್ಷಣ ಇಲಾಖೆ ಹೈಕೋರ್ಟ್ ಮೇಟ್ಟಿಲೇರಿತ್ತು. ಹೈಕೋರ್ಟ್ ಕೂಡ ಕೆಎಟಿ ಆದೇಶ ಎತ್ತಿಹಿಡಿದಿದ್ದ ರಿಂದ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಂಡಿತ್ತು ಹೇಗಾ ದರೂ ಮಾಡಿ ಪ್ರಸಕ್ತ ಸಾಲಿನಲ್ಲಿ ಶಿಕ್ಷಕರ ವರ್ಗಾವಣೆ ಯನ್ನು ಸಮರ್ಪಕವಾಗಿ ಮಾಡಬೇಕು ಎಂದು ಪಟ್ಟು ಹಿಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಅಧ್ಯಾ ದೇಶದ ಮೂಲಕ ಕಾಯ್ದೆಗೆ ತಿದ್ದುಪಡಿ ತರಲು ಸರ ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತು ಎಂದರು.
ಇನ್ನೂ ಇಲಾಖೆಯ ಪ್ರಸ್ತಾವನೆಯಂತೆ ಕಳೆದ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಧ್ಯಾದೇಶದ ಮೂಲಕ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಲಾಯಿತು.ಅನಂತರ ನಾನು ಮತ್ತು ಇಲಾ ಖೆಯ ಅಧಿಕಾರಿಗಳು ಸೇರಿಕೊಂಡು ಅತ್ಯಂತ ಮುತುವರ್ಜಿ ವಹಿಸಿ ಶೀಘ್ರವೇ ತಿದ್ದುಪಡಿ ಆಧ್ಯಾ ದೇಶವನ್ನು ರಾಜ್ಯಪಾಲರಿಗೆ ಕಳುಹಿಸಿದೆವು ಅದ ರಂತೆ ರಾಜ್ಯಪಾಲರಿಂದ ಆಧ್ಯಾದೇಶಕ್ಕೆ ಅಂಕಿತವೂ ಬಿದ್ದು ರಾಜ್ಯಪತ್ರದಲ್ಲೂ ಹೊರಡಿಸಲಾಗಿದೆ. ಹೊಸ ದಾಗಿ ಆಗಿರುವ ತಿದ್ದುಪಡಿಯಂತೆ ವರ್ಗಾವಣೆ ಪ್ರಕ್ರಿ ಯೆಯನ್ನು ಆನ್‌ಲೈನ್ ಮೂಲಕವೇ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂ ಡಿದೆ. 2019-20ರಲ್ಲಿ ಕಡ್ಡಾಯ ಹಾಗೂ ಹೆಚ್ಚುವರಿ ವರ್ಗಾವಣೆಯಿಂದ ತಾಲೂಕು ಜಿಲ್ಲೆಗಳಿಂದ ವರ್ಗಾ ವಣೆ ಹೊಂದಿರುವವರು ಪುನಃ ತವರು ತಾಲೂಕು ಅಥವಾ ಜಿಲ್ಲೆಗೆ ವರ್ಗಾವಣೆ ಪಡೆಯಲು ಆದ್ಯತೆ ನೀಡುವ ತಿದ್ದುಪಡಿ ಇದಾಗಿದೆ. ಈ ಹಿಂದೆ ಕಡ್ಡಾಯ ವರ್ಗಾವಣೆಯ ಶಿಕ್ಷೆ ಅನುಭವಿಸಿರುವ ಬಹುತೇಕ ಶಿಕ್ಷಕರಿಗೆ ಇದರಿಂದ ಅನುಕೂಲವಾಗಲಿದೆ.ತವರು ಜಿಲ್ಲೆ ತಾಲೂಕುಗಳಲ್ಲಿ ಹುದ್ದೆ ಖಾಲಿಯಿದ್ದರೆ ಸುಲಭ ವಾಗಿ ವರ್ಗಾವಣೆ ಪಡೆಯಲು ಅನುಕೂಲವಾಗ ಲಿದೆ.ಶಿಕ್ಷಕರ ವರ್ಗಾವಣೆ ವಿಚಾರವಾಗಿ ಸರಕಾರ ವಾರದೊಳಗೆ ಅಧ್ಯಾದೇಶದ ನಿರ್ಧಾರ ತೆಗೆದುಕೊಂ ಡು, ರಾಜ್ಯಪಾಲರಿಂದಲೂ ಅಂಕಿತ ಪಡೆದಿದೆ. ಅಷ್ಟೇ ವೇಗವಾಗಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಯನ್ನು ಮುಗಿಸಬೇಕು. ಮತ್ತೂಮ್ಮೆ ಕಾನೂನಿನ ತೊಡಕು ಅಥವಾ ಬೇರೆ ಯಾವುದೇ ತೊಂದರೆ, ಅಡ್ಡಿ, ಆತಂ ಕವಿಲ್ಲದೇ ಶೀಘ್ರವಾಗಿ ವರ್ಗಾವಣೆ ಪ್ರಕ್ರಿಯೆ ಮುಗಿ ಸಬೇಕು.ಈಗಾಗಲೇ ಶಾಲೆಗಳಿಗೆ ಬೇಸಗೆ ರಜಾ ಘೋಷಣೆ ಮಾಡಿರುವುದರಿಂದ ಕೂಡಲೆ ವರ್ಗಾವ ಣೆ ಪ್ರಕ್ರಿಯೆ ಆರಂಭಿಸಿದರೆ, ಮುಂದಿನ ಶೈಕ್ಷಣಿಕ ವರ್ಷಕ್ಕೆ ಸರಿಯಾಗಿ ಹೊಸ ಸ್ಥಳದಲ್ಲಿ ಕಾರ್ಯಾರಂ ಭಕ್ಕೆ ಶಿಕ್ಷಕರಿಗೂ ಅನುಕೂಲವಾಗಲಿದೆ.ಪ್ರಸಕ್ತ ಸಾಲಿ ನಲ್ಲಿ ವರ್ಗಾವಣೆಗೆ 72 ಸಾವಿರಕ್ಕೂ ಅಧಿಕ ಅರ್ಜಿ ಗಳು ಈಗಾಗಲೇ ಸಲ್ಲಿಕೆಯಾಗಿವೆ. ಕೌನ್ಸೆಲಿಂಗ್ ಹಾಗೂ ಸ್ಥಳ ನಿಯುಕ್ತಿ ಆದೇಶ ಪ್ರಕ್ರಿಯೆ ಆನ್‌ಲೈನ್ ಮೂಲಕವೇ ನಡೆಯುವುದರಿಂದ ಆದಷ್ಟು ಬೇಗ ಪ್ರಕ್ರಿಯೆ ಆರಂಭಿಸಬೇಕು ಮತ್ತು ಶಿಕ್ಷಕ ಮಿತ್ರ ಆ್ಯಪ್ ನಲ್ಲಿಯೂ ಯಾವುದೇ ತಾಂತ್ರಿಕ ದೋಷ ಉಂಟಾಗ ದಂತೆಯೂ ಸಾರ್ವಜನಿಕ ಶಿಕ್ಷಣ ಇಲಾಖೆ ಎಚ್ಚರ ವಹಿಸಬೇಕು. ಕಳೆದ ಅನೇಕ ವರ್ಷಗಳಿಂದ ವರ್ಗಾ ವಣೆಗಾಗಿ ಕಾಯುತ್ತಿರುವ ಅದೆಷ್ಟೋ ಶಿಕ್ಷಕರು ಇದ ರಿಂದ ನಿಟ್ಟುಸಿರು ಬಿಡಲಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.