ಬೆಂಗಳೂರು –
ಕೋವಿಡ್ ಕಾರಣ ಪತಿಯನ್ನು ಕಳೆದುಕೊಂಡ ಮಹಿಳೆ ಅನುಕಂಪ ಆಧಾರದ ಮೇಲೆ ಸರ್ಕಾರಿ ಕೆಲಸ ಪಡೆದು ಕೊಂಡರೂ ಕೂಡಾ ವೇತನ ಕೊಡಲು 11 ತಿಂಗಳು ಸತಾಯಿಸಿದ ಪ್ರಕರಣವೊಂದನ್ನು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರೇ ಬಹಿರಂಗಪಡಿಸಿದ್ದಾರೆ.ಹೌದು ಚಿಕ್ಕಮಗ ಳೂರಿನಲ್ಲಿ ಆ ಮಹಿಳೆ ಕೆಲಸ ಮಾಡುತ್ತಿದ್ದರು. ಚಿಕ್ಕಮಗ ಳೂರು ಪ್ರವಾಸ ವೇಳೆ ಕಚೇರಿಯೊಂದರ ಆವರಣದಲ್ಲಿ ನಿಂತಿದ್ದ ಮಹಿಳೆಯನ್ನು ಮಾತನಾಡಿಸಿದಾಗ ವೇತನ ವಿಚಾರ ತಿಳಿಸಿದರು.ವೇತನ ನೀಡದಿರಲು ಕಾರಣವೇನು ಎಂದು ಅರಿಯಲು ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದಾಗ ಸರಿಯಾದ ಮಾಹಿತಿ ಇರಲಿಲ್ಲ.ಸೂಕ್ಷ್ಮವಾಗಿ ಗಮನಿಸಿದಾಗ ಜಿಲ್ಲಾ ಪಂಚಾಯಿತಿ ಸಿಇಒ ಕಚೇರಿಯಲ್ಲಿ ಎರಡು ತಿಂಗಳು, ಮೂರು ತಿಂಗಳು ಡಿಡಿಪಿಐ ಕಚೇರಿ ಯಲ್ಲಿ ಸಕಾರಣವಿಲ್ಲದೆ ಕಡತ ಇತ್ತು.ಕೂಡಲೇ ವೇತನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದೆ. ಕೇವಲ ಒಂದೇ ದಿನದಲ್ಲಿ ಕೆಲಸ ಆಯಿತು ಎಂದು ವಿವರಿಸಿ ದರು.
ಸಂಬಂಧಪಟ್ಟ ಅಧಿಕಾರಿ ಮತ್ತು ಸಿಬ್ಬಂದಿ ತಾವು ಮಾಡ ಬೇಕಾದ ಕೆಲಸ ಮಾಡಿದ್ದರೆ ಆ ಮಹಿಳೆ 11 ತಿಂಗಳು ಕಾಲ ವೇತನಕ್ಕಾಗಿ ಕಾಯುವ ಪರಿಸ್ಥಿತಿ ಬರುತ್ತಿರಲಿಲ್ಲ. ಇಂತಹ ಘಟನೆಗಳು ಮರಕಳಿಸದಂತೆ ನೋಡಿಕೊಳ್ಳುವ ಜವಾ ಬ್ದಾರಿ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿ ಮೇಲಿದೆ. ಅನಗತ್ಯ ವಿಳಂಬ ಮಾಡಬಾರದು ಎಂದು ನಾಗೇಶ್ ಹೇಳಿ ವಿಳಂಬ ಮಾಡಿದವರಿಗೆ ಖಡಕ್ ಸಂದೇಶ ನೀಡಿದರು