ಹುಬ್ಬಳ್ಳಿ –
ನಮ್ಮ ಸಮಾಜದ ಹಿರಿಯರಾದ ಮತ್ತು ಹುಬ್ಬಳ್ಳಿ ತಾಲೂಕಾ ಗಾಣದ ಸಂಘದ ಮಾಜಿ ಅಧ್ಯಕ್ಷರು ಹಾಗೂ ವಿಶ್ವ ಕಲ್ಯಾಣ ಸಹಕಾರ ಬ್ಯಾಂಕ ಹುಬ್ಬಳ್ಳಿ ಇದರ ಸಂಸ್ಥಾಪಕ ಸದಸ್ಯರಾಗಿದ್ದ ಮತ್ತು ನಮ್ಮೊಂ ದಿಗೆ ಹೆಗಲು ಕೊಟ್ಟು ಗಟ್ಟಿ ಧ್ವನಿಯಿಂದ ಮತ್ತು ನಿರ್ಭಡೆಯಿಂದ ಮಾತನಾಡುತ್ತಿದ್ದ ಕಲ್ಲೇಶ್ವರ ಚನ್ನಪ್ಪ.ದೊಡ್ಡಗಾಣಿಗೇರ ಸಾ. ಹುಬ್ಬಳ್ಳಿ ಇವರು ದಿ.01.06.2021 ರ ಮಂಗಳವಾರ ಬೆಳಿಗ್ಗೆ ನಮ್ಮನು ಅಗಲಿದ್ದಾರೆ.ಇದರಿಂದಾಗಿ ಮೇಲಿನ ಮೂರು ಸಂಸ್ಥೆ ಗಳು ಬಡವಾಗಿದ್ದಾವು ಅಲ್ಲದೇ ಗಟ್ಟಿ ದ್ವನಿಯೊಂದು ತನ್ನ ಉಸಿರನ್ನು ನಿಲ್ಲಿಸಿದೆ ಸಮಾಜ ಮತ್ತು ಉಳಿದ ಸಂಸ್ಥೆಗಳು ನಲವತ್ತು ವರ್ಷದ ತಮ್ಮ ನಂಟನ್ನು ಕಳೆದುಕೊಂಡವು. ಶ್ರೀ ಕಲ್ಮೇಶ್ವರ ಇವರು ಬಹು ಮುಖ ಪ್ರತಿಭೆ ಇದ್ದವರು ಇವರು ಶ್ರೀ ಸಿದ್ದಾರೂಢರ ಪರಮ ಭಕ್ತರಾಗಿದ್ದರಿಂದ ಶ್ರೀ ಸಿದ್ದಾರೂಢರ ಮೇಲೆ ರಗಳೆಯನ್ನು ರಚಿಸಿ ಅವರ ಕೃಪೆಗೆ ಪಾತ್ರರಾಗಿದ್ದರು.

ಚುಟುಕು ಕವಿತೆಗಳನ್ನು ರಚಿಸಿ ಕವಿ ಆಗಿದ್ದರು ಇವರು ರಚಿಸಿದ ಸಾಕಷ್ಟು ಪದ್ಯಗಳು ಅಪ್ರಕಟಿತ ವಾಗಿ ಉಳಿದಿದೆ ಇವರು ಜನಪ್ರಿಯ ಜಾನಪದ ಹಾಡುಗಳನ್ನು ಹಾಡುವುದರ ಮೂಲಕ ಜಾನಪದ ಗಾಯಕ ರಾಗಿದ್ದರು.ಇವರ ಜನಪ್ರಿಯ ಗೀತೆ ಕುಂಕಿ ಯ ಮೇಲೆ ಕುರಿಮರಿ ಹೊತ್ಕೊಂಡು ಕುರುಬರ ರಾಣಿ ಮತ್ತು ನಾ ಕುಡಿದು ಹೋಗಬಾರದ್ಯಾಕೆ ಮನೆಗೆ ಎಂಬ ಗೀತೆಗಳನ್ನು ಅವರ ಬಾಯಿಂದಲೇ ಕೇಳುವುದು ಅತೀ ಸುಂದರವಾಗಿತ್ತು.ಆದರೆ ಈಗ ಆ ಹಾಡು ಹಾಡಿನ ದ್ವನಿನಿಂತು ಹೋಯಿತು.ಇವರು 1977ರಲ್ಲಿ ಜಯಪ್ರಕಾಶ ನಾರಾಯಣ ಇವರ ಪ್ರಭಾವಕ್ಕೆ ಒಳಗಾಗಿ ರಾಜಕೀಯಕ್ಕೆ ಧುಮುಕಿದರು ಆಗ ತಮ್ಮ ರಾಜಕೀಯ ಗುರುವೆಂದು ಜನತಾ ಪಕ್ಷದಲ್ಲಿದ ದಿ!!ಸಿ.ಬಿ ಸಜ್ಜನರ ವಕೀಲರು ಹುಬ್ಬಳ್ಳಿ ಇವರನ್ನು ರಾಜಕೀಯ ಗುರುವಾಗಿ ಸ್ವೀಕರಿಸಿದರು ಮುಂದೆ ದಿ!!ಎಸ್.ಆರ್.ಬೊಮ್ಮಾಯಿ,ದಿ!!ಎಸ್.ಆಯ್.ಶೆಟ್ಟರ,ದಿ!!ವ್ಹಿ.ಬಿ.ಹೊಂಬಳ ದಿ!!ಬಸನಗೌಡ,ದಿ!!ಬೂಧಪ್ಪ ಬಳೇಗಾರ ಮುಂತಾದವ ರ ಸಂಪರ್ಕದಿಂದ ರಾಜಕೀಯದಲ್ಲಿ ಬೆಳೆಯಲು ಪ್ರಯತ್ನಿಸಿದರು ಹೀಗಾಗಿ ಅವರು ಬಹುಮುಖ ಪ್ರತಿಭೆ ಹೊಂದಿದವರಾಗಿದ್ದರು ಆ ಪ್ರತಿಭೆ ಇಂದು ಕಮರಿ ಹೋಗಿದೆ.ಸಮಾಜದ ಕೆಲಸ ಕಾರ್ಯಗಳಲ್ಲಿ ಅಂದಿನ ಅದ್ಯಕ್ಷರಾಗಿದ್ದ ದಿ!!ಶಿವಪ್ಪಣ್ಣ ಜಿಗಳೂರ ದಿ!!ಸಿ.ಬಿ.ಸಜ್ಜನರ ದಿ!!ನೀಲಪ್ಪ ಸಜ್ಜನರ ದಿ!!ಎಮ್.ಪಿ.ಹೊಸಮನಿ,ಎಮ್.ಎಮ್.ಸಜ್ಜನರ Ex MLA ಮುದ್ದೇಬಿಹಾಳ ಮುಂತಾದ ಹಿರಿಯರೊಂದಿ ಗೆ ಮತ್ತು ಇಂದಿನ ಅದ್ಯಕ್ಷರಾದ ಸಂಗು ಸಜ್ಜನರ, ಸೋಮಪ್ಪ ಗುಂಜಾಳ,ಶರಣಪ್ಪ ಸಜ್ಜನರ ಸಮಾಜ ದ ಕಾರ್ಯದರ್ಶಿಯಾಗಿರುವ ಸಂಗಮೇಶ ಸಜ್ಜನರ ವಕೀಲರು ಮಹಾಲಿಂಗೇಶ ಜಿಗಳೂರ ಅಂದಾನ್ಯಪ್ಪ ಸಜ್ಜನರ ಮತ್ತು ಕಿರಿಯರಾದ ಅರುಣ ಜಿಗಳೂರ ವೀರೇಶ ಮಟ್ಟಿ ಈರಣ್ಣ ಉಗರಗೋಳ ಮುಂತಾದ ವರೊಂದಿಗೆ ಕೆಲಸ ಮಾಡಿದ ಅನುಭವ ಇಂದು ಕಮರಿ ಹೋಯಿತು.ಭಗವಂತನು ಇವರ ದತ್ತಕ ಪುತ್ರನಿಗೆ ಮತ್ತು ಪರಿವಾರದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ
ದುಃಖತ್ತಪ್ತರು
1)ಅಖಿಲಭಾರತ ಸಜ್ಜನ ಸಮಾಜ ಹುಬ್ಬಳ್ಳಿ
ಶ್ರೀ ಸಂಗನಬಸಪ್ಪ.ಗು ಸಜ್ಜನರ (ಅಧ್ಯಕ್ಷರು)
ಶ್ರೀ ಮಹಾಲಿಂಗೇಶ ಶಿ.ಜಿಗಳೂರ (ಉಪಾದ್ಯಕ್ಷರು)
ಶ್ರೀ ಸಂಗಮೇಶ.ಎಮ್.ಸಜ್ಜನರ(ಗೌರವ.ಕಾರ್ಯದರ್ಶಿಗಳು)
2) ವಿಶ್ವ ಕಲ್ಯಾಣ ಸಹಕಾರ ಬ್ಯಾಂಕ ನಿ.ಹುಬ್ಬಳ್ಳಿ
ಶ್ರೀ ಸಂಗಮೇಶ.ಎಮ್. ಸಜ್ಜನರ
(ಸಂಸ್ಥಾಪಕರು ಹಾಗು ಅದ್ಯಕ್ಷರು)
ವೀರೇಶ ಹುನಗುಂದ (ಉಪಾದ್ಯಕ್ಷರು)
ಶ್ರೀಮತಿ ಜಯಶ್ರೀ ನಾಗರಳ್ಳಿ(ಪ್ರಭಾರಿ ಮ್ಯಾನೇಜರ್)
3) ಹುಬ್ಬಳ್ಳಿ ತಾಲ್ಲೂಕ ಔದ್ಯೋಗಿಕ ಸಹಕಾರಿ ಎಣ್ಣೆಯ ಸಂಘ.ಹುಬ್ಬಳ್ಳಿ
ಶ್ರೀ ವೀರೇಶ ಚ.ಮಟ್ಟಿ(ಅದ್ಯಕ್ಷರು)
ಶ್ರೀ ವೀರೇಶ ಹುನಗುಂದ (ಗೌರವ ಕಾರ್ಯದರ್ಶಿಗಳು)
ಶ್ರೀ ಸಂಗಮೇಶ ಎಮ್.ಸಜ್ಜನರ ವಕೀಲರು (ಲೆಕ್ಕತಪಾಸಿಗರು ಹಾಗೂ ನಿರ್ವಹಣೆ)