ಹುಬ್ಬಳ್ಳಿ ಧಾರವಾಡ –
ಎಲ್ಲರ ಹಾಗೇ ನಮ್ಮನ್ನು ಸರ್ಕಾರಿ ನೌಕರರನ್ನಾಗಿ ಮಾಡಿ ಸೇರಿದಂತೆ ಕೆಲ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯಾಧ್ಯಂತ ಹೋರಾಟ ಮಾಡುತ್ತಿರುವ ರಾಜ್ಯ ಸಾರಿಗೆ ನೌಕರರ ಪ್ರತಿಭಟನೆ ಮುಂದುವರೆದಿದೆ. ನಿನ್ನೇಯಿಂದ ರಾಜ್ಯವ್ಯಾಪಿ ಸಾರಿಗೆ ನೌಕರರು ಹೋರಾಟವನ್ನು ಮಾಡ್ತಾ ಇದ್ದಾರೆ. ಇಂದು ಕೂಡಾ ಬಸ್ ಗಳ ಸಂಚಾರವನ್ನು ಬಂದ್ ಮಾಡಿರುವ ಸಾರಿಗೆ ನೌಕರರು ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ. ಇವೆಲ್ಲದರ ನಡುವೆ ಪ್ರತಿಭಟನಾ ನಿರತ ನೌಕರರನ್ನು ಬಂಧನ ಮಾಡ್ತಾರೆ ಎಂಬ ಸುದ್ದಿಯೊಂದು ಹೋರಾಟ ಮಾಡುತ್ತಿದ್ದ ನೌಕರರಿಗೆ ಕೇಳಿ ಬಂದಿದೆ. ಈ ಒಂದು ಸಂದೇಶ ಕೇಳಿ ಬರುತ್ತಿದ್ದಂತೆ ಹುಬ್ಬಳ್ಳಿ ಧಾರವಾಡದಲ್ಲಿ ಹೋರಾಟ ಮಾಡುತ್ತಿದ್ದ ಸಾರಿಗೆ ನೌಕರರು ತೆರಳಿದ್ದಾರೆ.
ಒಂದೇ ಕಡೆ ಕುಳಿತುಕೊಂಡು ಹೋರಾಟ ಮಾಡುತ್ತಿದ್ದ ಐದು ನೂರಕ್ಕೂ ಹೆಚ್ಚು ನೌಕರರನ್ನು ಬಂಧಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದಂತೆ ಇದರಿಂದ ಎಚ್ಚೇತ್ತುಕೊಂಡ ಪ್ರತಿಭಟನಾನಿರತ ಎಲ್ಲಾ ನೌಕರರು ಹೋರಾಟದ ಸ್ಥಳದಿಂದ ತೆರಳಿದ್ದಾರೆ. ಪೊಲೀಸರ ಮೂಲಕ ರಾಜ್ಯ ಸರ್ಕಾರ ಹೋರಟವನ್ನು ಹತ್ತಿಕ್ಕುವ ಪ್ರಯತ್ನವನ್ನು ಮಾಡಲು ಹೋರಾಟ ಮಾಡುವವರನ್ನೇ ಬಂಧಿಸುವ ಪ್ಲಾನ್ ಮಾಡಿದೆಯಂತೆ ಹೀಗಾಗಿ ಹೋರಾಟ ನಿರತ ಎಲ್ಲರನ್ನೂ ಬಂಧಿಸುತ್ತಾರೆ ಎಂಬ ಸಂದೇಶ ಕೇಳುತ್ತಿದ್ದಂತೆ ಪ್ರತಿಭಟನೆ ಮಾಡುತ್ತಿದ್ದ ಎಲ್ಲಾ ಸಾರಿಗೆ ನೌಕರರು ಹೋರಾಟದ ಸ್ಥಳದಿಂದ ನಾಪತ್ತೆಯಾಗಿದ್ದಾರೆ.
ಗುಂಪು ಗುಂಪಾಗಿದ್ದ ಎಲ್ಲರೂ ಸ್ಥಳದಿಂದ ಅಜ್ಞಾತ ಸ್ಥಳದತ್ತ ಹೋಗಿದ್ದು ಇನ್ನೂ ಇತ್ತ ಇಲಾಖೆಯ ಕೆಲ ಹಿರಿಯ ಅಧಿಕಾರಿಗಳು ಅವರನ್ನು ಪತ್ತೆ ಹಚ್ಚುವ ಕೆಲಸಕ್ಕೇ ಮುಂದಾಗಿದ್ದಾರೆ. ಒಟ್ಟಾರೆ ಒಂದೇಡೆ ಹೋರಾಟದ ಕಾವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದರೆ ಮತ್ತೊಂದೆಡೆ ಪ್ರತಿಭಟನಾ ನಿರತರನ್ನು ಬಂಧನ ಮಾಡುತ್ತಾರೆ ಎಂಬ ಮಾತು ಗುಲ್ಲೆಬ್ಬಿದ್ದು ಇವೆಲ್ಲದರ ನಡುವೆ ಈಗಂತೂ ಹೋರಾಟ ಮಾಡುತ್ತಿರುವ ಎಲ್ಲಾ ನೌಕರರು ಹೋರಾಟದ ಸ್ಥಳಧಿಂದ ಕಾಲು ಕಿತ್ತಿದ್ದು ಇನ್ನೂದರೂ ಇಲಾಖೆಯ ಸಚಿವರು ಮುಖ್ಯಮಂತ್ರಿಗಳು ಇವರೊಂದಿಗೆ ಮಾತನಾಡೊದು ಅವಶ್ಯಕವಿದೆ ಇಲ್ಲವಾದ್ರೆ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಲಕ್ಷಣಗಳು ಕಾಣುತ್ತಿವೆ.