ಚನ್ನಗಿರಿ –
ಶಾಲೆಯಿಂದ ದೂರ ಉಳಿದಿದ್ದ ಎಂಟು ವಿದ್ಯಾರ್ಥಿ ಗಳನ್ನು ಮರಳಿ ಶಾಲೆಗೆ ಸೇರಿಸಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ ಚನ್ನಗಿರಿ ಶಿಕ್ಷಕರು ಹೌದು ತಾಲೂಕಿನ ತಾವರೆಕೆರೆ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕರು ಶಾಲೆ ತೊರೆದು ಮನೆಯಲ್ಲಿ ಉಳಿದಿದ್ದರು 8 ವಿದ್ಯಾರ್ಥಿಗಳನ್ನು ಗುರುತಿಸಿ ಮತ್ತೆ ವಾಪಸ್ ಶಾಲೆಗೆ ಕರೆತಂದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆ ಸಹಶಿಕ್ಷಕ ಜಿ.ಪಿ. ಲಿಂಗೇಶ್‌ಮೂರ್ತಿ, ಮಗುವೊಂದು ಕಲಿತರೆ ಗ್ರಾಮವೊಂದು ಕಲಿತಂತೆ ಎನ್ನುವ ಮಾತು ಮಾತಾಗಿ ಉಳಿಯಬಾರದು ಎನ್ನುವ ಕಾರಣಕ್ಕೆ ಶಾಲೆ ಪ್ರಾರಂಭದಲ್ಲಿ ದಾಖಲಾತಿ ಪಡೆದು ಸ್ವಲ್ಪ ಸಮಯ ಶಾಲೆಗೆ ಬಂದು ಮನೆ ಯಲ್ಲಿ ಇರುವಂತಹ ಮಕ್ಕಳ ಪಟ್ಟಿ ತಯಾರಿಸಿ, ಅವರ ಪಾಲಕರ ಮನವೊಲಿಸಿ 8 ಮಕ್ಕಳನ್ನು ವಾಪಸ್ ಕರೆತರಲಾಗಿದೆ ಎಂದರು
ಆರ್ಥಿಕವಾಗಿ ಹಿಂದುಳಿದ ಪಾಲಕರು ತಮ್ಮ ಮಕ್ಕಳನ್ನು ಶಾಲೆ ಬಿಡಿಸಿ ಜಮೀನಿಗೆ ಕರೆದು ಕೊಂಡು ಹೋಗುತ್ತಾರೆ.ಅಂತಹ ಮಕ್ಕಳನ್ನು ಅವರ ಪಾಲಕರ ಮನವೊಲಿಸಿ ಕರೆತರುವುದು ಕಷ್ಟ ಆದರೂ, ಛಲಬಿಡದೇ ಇಂದು ಕೆಲ ಮಕ್ಕಳನ್ನು ಕರೆತರಲಾಗಿದೆ ಎಂದರು.ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಪ್ರಸನ್ನಕುಮಾರ್, ಹಿರಿಯ ಸಹಶಿಕ್ಷಕ ಗವಿ ರಂಗಸ್ವಾಮಿ, ಶಾಲಾಭಿವೃದ್ಧ್ದಿ ಸಮಿತಿ ಸದಸ್ಯರು, ಸಹ ಶಿಕ್ಷಕರು ಇದ್ದರು.
ಸುದ್ದಿ ಸಂತೆ ನ್ಯೂಸ್ ಚನ್ನಗಿರಿ…..