ಹುಬ್ಬಳ್ಳಿಯಲ್ಲಿ ರಸ್ತೆ ಮಧ್ಯದಲ್ಲಿಯೇ ಹೊಡೆದಾಟ – ಸಿನಿಮಾ ಶೂಟಿಂಗ್ ಅಲ್ಲ ರೀಯಲ್ ಮಾರಾಮಾರಿ…..

Suddi Sante Desk

ಆಂಕರ್ –

ಎರಡು ಗುಂಪಿನ ಯುವಕರು ಪರಸ್ಪರ ಹೊಡೆದಾಡಿ ಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ನಗರದ ಅಪ್ಸರಾ ಟಾಕೀಸ್ ಮುಂದೆ ಈ ಒಂದು ಘಟನೆ ನಡೆದಿದೆ.

ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿದ ಸಲಗ ಚಿತ್ರದ ಮೊದಲ ಶೋ ಮುಕ್ತಾಯಗೊಂಡು ಜನರೆಲ್ಲಾ ಹೊರ ಬರುತ್ತಿರುವ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪು ಹೊಡೆದಾಡಿಕೊಂಡಿದ್ದು

ಸಿನಿಮಾ ನೋಡಲು ಬಂದವರೇ ಹೊಡೆದಾಡಿದ್ದಾರೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.ಗಲಾಟೆಯಲ್ಲಿ ಪಾಲ್ಗೊಂಡ ವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಇನ್ನೂ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಹೊಡೆದಾಡುತ್ತಿದ್ದವರನ್ನು ಬೆದರಿಸಿ ಕಳುಹಿಸಿಕೊಟ್ಟರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.