ಹೊಸನಗರ –
ಶಾಲಾ ಕೊಠಡಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಘಟನೆ ಹೊಸನಗರದಲ್ಲಿ ನಡೆದಿದೆ.ತಾಲ್ಲೂಕಿನ ಮಾರುತೀಪುರ ಪ್ರೌಢಶಾಲೆಯಲ್ಲಿ ಈ ಒಂದು ಘಟನೆ ನಡೆದಿದೆ.ಘಟನೆಯಲ್ಲಿ ಶಾಲಾ ಮಕ್ಕಳಿಗೆ ವಿತರಿಸಲು ಸಂಗ್ರಹಿಸಿಟ್ಟಿದ್ದ ಸಮವಸ್ತ್ರ ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ.ಸೋಮವಾರ ಬೆಳಿಗ್ಗೆ ಶಾಲಾ ಕೊಠಡಿ ತೆರೆದಾಗ ಸಮವಸ್ತ್ರದ ರಾಶಿಗೆ ಬೆಂಕಿ ಬಿದ್ದಿದ್ದು ಸುಟ್ಟು ಕರಕಲಾಗಿದ್ದವು.2020- 21ನೇ ಸಾಲಿನ ಮಕ್ಕಳಿಗೆ ವಿತರಿಸಲು ಶಾಲಾಡಳಿತ ಕೊಠಡಿ ಯಲ್ಲಿ ಸಂಗ್ರಹಿಸಿಡಲಾಗಿತ್ತು.ಶನಿವಾರ ಸಂಜೆಯವ ರೆಗೂ ಸುಸ್ಥಿತಿಯಲ್ಲಿದ್ದವು.ಕೊಠಡಿಯ ಒಂದು ಕಿಟಕಿ ಯ ಬಾಗಿಲು ಪೂರ್ಣವಾಗಿ ಮುಚ್ಚಲು ಬರುತ್ತಿರ ಲಿಲ್ಲ.ಇದನ್ನು ಬಳಸಿ ಕಿಡಿಗೇಡಿಗಳು ಹೊರಗಿನಿಂದ ಬಟ್ಟೆಗೆ ಬೆಂಕಿ ಹಚ್ಚಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿಯವರು ಸಂಶಯ ವ್ಯಕ್ತಪಡಿಸಿದ್ದಾರೆ
ಬಟ್ಟೆಯನ್ನು ಕೊಠಡಿಯ ಮಧ್ಯದಲ್ಲಿ ಟೇಬಲ್ ಮೇಲೆ ಜೋಡಿಸಿಡಲಾಗಿತ್ತು.ಇದರ ಸಮೀಪವೇ ಪುಸ್ತಕ ಇತರೆ ಪೀಠೋಪಕರಣಗಳು ಸಹ ಇದ್ದವು. ಆದರೆ ಸಮವಸ್ತ್ರ ಮಾತ್ರ ಸುಡಲಾಗಿದೆ.ಉಳಿದ ವಸ್ತುಗಳಿಗೆ ಹಾನಿಯಾಗಿಲ್ಲ.ಇದು ಚರ್ಚೆಗೆ ಗ್ರಾಸ ವಾಗಿದೆ.ಇನ್ನೂ ವಿಷಯ ತಿಳಿದ ಶಾಸಕ ಎಚ್. ಹಾಲಪ್ಪ ಹರತಾಳು,ಕ್ಷೇತ್ರ ಶಿಕ್ಷಣಾಧಿಕಾರಿ ವೀರಭ ದ್ರಪ್ಪ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಪೊಲೀಸರು ದೂರನ್ನು ದಾಖಲು ಮಾಡಿ ಕೊಂಡಿದ್ದು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ