ಬೆಂಗಳೂರು
ಕೋವಿಡ್ ನಿಯಂತ್ರಣಕ್ಕೆ ಸಧ್ಯ ಮಾಡಲಾಗಿರುವ ಲಾಕ್ ಡೌನ್ ವಿಚಾರ ಕುರಿತು ಅದನ್ನು ಮುಂದು ವರಿಸಬೇಕೆ ಬೇಡ ಎಂಬ ಕುರಿತು ಮೇ 23 ರಂದು ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಯಡಿ ಯೂರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾ ಡಿದ ಅವರು ರಾಜ್ಯದಲ್ಲಿ ಈಗಾಗಲೇ ಹೇರಲಾಗಿರು ವ ಲಾಕ್ ಡೌನ್ ನ್ನು ವಿಸ್ತರಣೆ ಮಾಡುವ ಕುರಿತು ಸದ್ಯ ಯಾವುದೇ ತೀರ್ಮಾನ ಮಾಡಿಲ್ಲ.ಅದನ್ನು ವಿಸ್ತರಿಸುವ ಕುರಿತು 23ಕ್ಕೆ ತೀರ್ಮಾನ ಮಾಡಲಾಗು ವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂ ರಪ್ಪ ಹೇಳಿದರು

ಕೋವಿಡ್ 19 ಸಾಂಕ್ರಾಮಿಕ 2ನೇ ಅಲೆಯ ತೀವ್ರ ತೆಯಿಂದಾಗಿ ಹೆಚ್ಚುತ್ತಿರುವಂತ ಸೋಂಕಿತರ ಸಂಖ್ಯೆ ನಿಯಂತ್ರಿಸುವ ಸಲುವಾಗಿ ಮೇ.24ರವರೆಗೆ ವಾಣಿ ಜ್ಯ ಮತ್ತು ಇತರೆ ಚಟುವಟಿಕೆಗಳಿಗೆ ನಿರ್ಬಂಧ ವಿಧಿ ಸೋದು ಅನಿವಾರ್ಯವಾದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ, ರಾಜ್ಯವ್ಯಾಪ್ತಿ ಲಾಕ್ ಡೌನ್ ಹೇರಿತ್ತು. ಈ ನಿರ್ಬಂಧದ ನಡುವೆಯು ಕೆಲವು ಸೇವೆಗೆ ಅವಕಾಶ ಕಲ್ಪಿಸಲಾಗಿತ್ತು.ಸಚಿವ ಸಂಪುಟದ ಹಿರಿಯ ಸಚಿವ ರೊಂದಿಗೆ ಸಭೆ ಮುಗಿಸಿದ ಬಳಿಕ ವಿಧಾನಸೌಧದಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಮಾತನಾಡಿದ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ, ಈಗ ಸರ್ಕಾರದ ಇತಿಮಿತಿಯಲ್ಲಿ ಸಾಧ್ಯವಾದಷ್ಟು ಆರ್ಥಿಕ ಪರಿಹಾರ ಪ್ಯಾಕೇಜ್ ಗಳನ್ನು ಘೋಷಣೆ ಮಾಡಿದ್ದೇವೆ.ಇನ್ನೂ ಈಗ ಹೇರಲಾಗಿರುವ ಲಾಕ್ ಡೌನ್ ಮೇ 24ಕ್ಕೆ ಮುಗಿಯಲಿದೆ. ಲಾಕ್ ಡೌನ್ ಯಾವ ಮಟ್ಟಿಗೆ ಬೆಂಗಳೂರು ನಗರ ಸೇರಿದಂತೆ ಜಿಲ್ಲೆಗಳಲ್ಲಿ ಪರಿಣಾ ಮ ಬೀರಿದೆ ಮುಂದೆ ಕೊರೊನಾ ನಿಯಂತ್ರಣಕ್ಕೆ ಏನು ಅಗತ್ಯ ಕ್ರಮಗಳನ್ನು ತೆಗೆದುಕೊಂಡರೆ ಉತ್ತ ಮ ಎಂದು ಸಚಿವರು ಅಧಿಕಾರಿಗಳೊಂದಿಗೆ 23 ರಂದು ಸಭೆ ನಡೆಸಿ ಮುಂದಿನ ತೀರ್ಮಾನಕ್ಕೆ ಬರು ತ್ತೇನೆ ಎಂದರು.