ಬೆಂಗಳೂರು –
ದಿನದಿಂದ ದಿನಕ್ಕೆ ರಾಜ್ಯದಲ್ಲಿ ಶರವೇಗದಲ್ಲಿ ಹರಡುತ್ತಿರುವ ಮಹಾಮಾರಿ ಕೊರೊನಾ ಕುರಿತು ರಾಜ್ಯದಲ್ಲಿ ಮುಂದಿನ ನಿರ್ಧಾರ ತೆಗೆದುಕೊಳ್ಳುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ಅಂದರೆ ಸೋಮವಾರ ಮಹತ್ವದ ಸಭೆಯನ್ನು ಕರೆದಿದ್ದಾರೆ.ಸೋಂಕು ಹರಡುತ್ತಿರು ವ ಹಿನ್ನೆಲೆಯಲ್ಲಿ ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಈ ಒಂದು ಸಭೆ ನಡೆಯಲಿದೆ
ನಾಳೆ ಸಂಜೆ 4 ಗಂಟೆಗೆ ಅಧಿಕಾರಿಗಳೊಂದಿಗೆ ಸಿಎಂ ಸಭೆ ನಡೆಸಲಿದ್ದಾರೆ.ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗ ಳ ಸಭೆ ನಡೆಯಲಿದ್ದು ಸಚಿವರಾದ ಆರ್.ಅಶೋಕ್, ಡಾ.ಕೆ ಸುಧಾಕರ್ ಕೂಡ ಭಾಗಿಯಾಗಲಿದ್ದಾರೆ.ಇವರೊಂದಿಗೆ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು, ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡಾ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಕೊರೋನಾ ತಡೆಗೆ ರಾಜ್ಯದಲ್ಲಿ ಸದ್ಯ ವಿಧಿಸಲಾಗಿರುವ ಕಠಿಣ ನಿಯಮಗಳು ಜನವರಿ 19 ಕ್ಕೆ ಅಂತ್ಯವಾಗಲಿವೆ. ಜನವರಿ 31 ರ ವರೆಗೆ ಅನೇಕ ನಿಯಮಗಳು ಮುಂದುವ ರೆಯಲಿವೆ.ಜನವರಿ 17 ರ ಸೋಮವಾರ ಬೆಳಗ್ಗೆ 5 ಗಂಟೆಗೆ ವೀಕೆಂಡ್ ಕರ್ಫ್ಯೂ ಕೂಡ ಮುಕ್ತಾಯವಾಗಲಿದೆ.
ಹೀಗಾಗಿ ನಾಳಿನ ಸಭೆಯಲ್ಲಿ ವೀಕೆಂಡ್ ಕರ್ಫ್ಯೂ, ಕಠಿಣ ನಿಯಮಗಳನ್ನು ಮುಂದುವರೆಸುವ ಕುರಿತಾಗಿ ಚರ್ಚೆ ನಡೆಸಲಾಗುತ್ತದೆ. ಅಲ್ಲದೆ, ಕೊರೋನಾ ನಿಯಂತ್ರಣಕ್ಕೆ ಮತ್ತಷ್ಟು ನಿರ್ಬಂಧ ಜಾರಿಗೊಳಿಸುವ ಸಾಧ್ಯತೆ ಇದ್ದು ಒಟ್ಟಾರೆ ರಾಜ್ಯದ ಭವಿಷ್ಯ ನಾಳೆ ನಿರ್ಧಾರವಾಗಲಿದೆ