ಹುಬ್ಬಳ್ಳಿ –
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಅಡುಗೆ ಅನಿಲದ ಪೈಪ್ ಲೈನ್ ಒಡೆದಿದೆ. ಪರಿಣಾಮ ಸುಮಾರು ಹೊತ್ತು ಸಾರ್ವಜನಿಕರಲ್ಲಿ ಭಯವನ್ನುಂಟು ಮಾಡಿದ ಘಟನೆಯೊಂದು ಹುಬ್ಬಳ್ಳಿಯ ಹಳೇ ಬಾದಾಮಿನಗರದ 1ನೇ ಕ್ರಾಸಿನಲ್ಲಿ ನಡೆದಿದೆ.

ಐಒಎಜಿ ಒಡೆತನದ ಪೈಪ್ ಲೈನ್ ಒಡೆದಿದ್ದು, ಸ್ಥಳೀಯರು ಆತಂಕಗೊಂಡಿದ್ದರು.ಇನ್ನೂ ಸ್ಥಳಕ್ಕೆ ದೌಡಾಯಿಸಿದ ಐಒಎಜಿ ಸಿಬ್ಬಂದಿಗಳು ಮೇನ್ ವಾಲ್ ಬಂದ್ ಮಾಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರು.

ಅಲ್ಲದೇ ಕೂಡಲೇ ದುರಸ್ತಿ ಕಾರ್ಯವನ್ನು ಪ್ರಾರಂಭಿಸಿದರು. ಅಲ್ಲದೇ ಗ್ಯಾಸ್ ಇಲ್ಲದೆ ಅಡುಗೆ ಮಾಡಲು ಮಹಿಳೆಯರು ಪರದಾಡುವಂತಾಯಿತು. ಭಾನುವಾರ ಕೂಡ ಇದೇ ಸ್ಥಳದಲ್ಲಿ ಗ್ಯಾಸ್ ಪೈಪ್ ಲೈನ್ ಒಡೆದು ಮೂರು ಗಂಟೆಗಳ ಕಾಲ ಸಂಪರ್ಕ ಕಡಿತಗೊಂಡಿತ್ತು ಈಗ ಮತ್ತೊಮ್ಮೆ ಸಮಸ್ಯೆಯಾಗಿದೆ
