ಬೆಳಗಾವಿ –
ಹೊರಟಿದ್ದ ಗೂಡ್ಸ್ ವಾಹನದಲ್ಲಿ ಬೆಂಕಿ ಕಾಣಿಸಿ ಕೊಂಡು ನಡು ರಸ್ತೆಯಲ್ಲಿಯೇ ಹೊತ್ತಿ ಉರಿದ ಘಟನೆ ಬೆಳಗಾವಿ ಯಲ್ಲಿ ನಡೆದಿದೆ.ಕುಂದಾನಗರಿ ಬೆಳಗಾವಿಯ ಥರ್ಡ್ ಗೇಟ್ ಬಳಿ ಈ ಒಂದು ಘಟನೆ ನಡೆದಿದೆ.
ಚಲಿಸುತ್ತಿದ್ದ ಬುಲೇರೋ ವಾಹನದ ಟಾಯರನಲ್ಲಿ ಈ ಒಂದು ಬೆಂಕಿ ಕಾಣಿಸಿಕೊಂಡಿದೆ.ಬಳಿಕ ನೋಡು ನೋಡುತ್ತಿದ್ದಂತೆ ವಾಹನವನ್ನ ಆವರಿಸಿದ ಬೆಂಕಿ
ನಂತರ ಸುದ್ದಿ ತಿಳಿದ ಅಗ್ನಿಶಾಮಕ ಸಿಬ್ಬಂದಿಯವರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು.ಇನ್ನೂ ವಾಹನದಲ್ಲಿ ಬೆಂಕಿಯನ್ನು ನೋಡಿದ ತಕ್ಷಣವೇ ಚಾಲಕ ಹೊರಗೆ ಬಂದಿದ್ದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ.ಬೆಳಗಾವಿ ಉದ್ಯಮಬಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.