ಬೆಂಗಳೂರು –
ಬಕ್ರೀದ್ ಆಚರಣೆ ಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟ ಮಾಡಿದೆ.ರಾಜ್ಯದ್ಯಂತ ಜು 21ರಂದು ನಡೆಯುವ ಬಕ್ರೀದ್ ಹಬ್ಬಕ್ಕೆ ಸಂಬಂಧಿಸಿ ಕೋವಿಡ್ 19 ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ನಿರ್ದೇಶನ ದಂತೆ ರಾಜ್ಯ ಸರಕಾರವು ಕೆಲವೊಂದು ಮಾರ್ಗ ಸೂಚಿಯನ್ನು ಪ್ರಕಟಿಸಿದೆ.

ಇನ್ನೂ ಈ ಬಾರಿಯೂ ಬಕ್ರೀದ್ ದಿನದಂದು ಈದ್ಗಾ ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಗೆ ನಿರ್ಬಂಧ ಹೇರಲಾಗಿದೆ.ಮಸೀದಿಗಳಲ್ಲಿ 50 ಮಂದಿಗಿಂತ ಹೆಚ್ಚು ಜನರು ಸೇರಿ ಸಾಮೂಹಿಕ ಪ್ರಾರ್ಥನೆ ಮಾಡಬಾರದು.ಒಂದು ವೇಳೆ ಅಧಿಕ ಮಂದಿ ಮಸೀದಿಗೆ ಆಗಮಿಸಿದರೆ ಹಂತ ಹಂತವಾಗಿ ನಮಾಜ್ ನಿರ್ವಹಿಸಲು ಅವಕಾಶ ಕಲ್ಪಿಸಬಹು ದಾಗಿದೆ ಎಂದು ಉಲ್ಲೇಖ ಮಾಡಲಾಗಿದೆ

ಇನ್ನೂ ಮಸೀದಿಗಳಲ್ಲಿ ಮಾಸ್ಕ್ ನ್ನು ಕಡ್ಡಾಯವಾಗಿ ಧರಿಸಬೇಕು.65 ವರ್ಷ ಮೇಲ್ಪಟ್ಟವರು ಮತ್ತು 10 ವರ್ಷ ಕಡಿಮೆ ವಯಸ್ಸಿನ ಮಕ್ಕಳು ಮಸೀದಿಗೆ ತೆರಳಬಾರದು.ನಮಾಜ್ ನಿರ್ವಹಿಸುವವರ ಮಧ್ಯೆ ಕನಿಷ್ಠ 6 ಅಡಿ ಅಂತರವಿರಬೇಕು.ಕೈಗಳನ್ನು ಸೋಪ್ ಅಥವಾ ಸ್ಯಾನಿಟೈಝರ್‌ನಿಂದ ಶುಚಿಗೊಳಿ ಸಬೇಕು.ಹಸ್ತಲಾಘವ ಮತ್ತು ಆಲಿಂಗನ ಮಾಡ ಬಾರದು ಎಂದು ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಅಧೀನ ಕಾರ್ಯ ದರ್ಶಿ ತಿಳಿಸಿದ್ದಾರೆ.ಮಸೀದಿಗೆ ಪ್ರವೇಶಿಸುವ ಮುನ್ನ ದೇಹದ ತಾಪಮಾನ ತಪಾಸಣೆ ಮಾಡಬೇಕು ಎಂದು ಉಲ್ಲೇಖ ಮಾಡಲಾಗಿದೆ

ಇನ್ನೂ ಪ್ರಮುಖವಾಗಿ ರಸ್ತೆಗಳು,ಪಾದಚಾರಿ ಮಾರ್ಗಗಳು,ಎಲ್ಲಾ ರೀತಿಯ ಆಸ್ಪತ್ರೆಯ ಆವರಣಗಳು,ನರ್ಸಿಂಗ್ ಹೋಂ ಒಳ ಮತ್ತು ಹೊರ ಆವರಣಗಳು,ಶಾಲಾ ಕಾಲೇಜುಗಳಲ್ಲಿ ತರಗತಿ ನಡೆಯುತ್ತಿದ್ದಲ್ಲಿ ಅಂತಹ ಶಾಲಾ-ಕಾಲೇಜುಗಳ ಒಳ ಮತ್ತು ಹೊರ ಆವರಣಗಳಲ್ಲಿ,ಆಟದ ಮೈದಾನ ಗಳಲ್ಲಿ, ಮಸೀದಿ ಮತ್ತು ಇತರ ಧಾರ್ಮಿಕ ಸ್ಥಳ- ಆವರಣಗಳಲ್ಲಿ,ಉದ್ಯಾನವನಗಳ ಒಳಗೆ ಮತ್ತು ಹೊರಗೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ವಧೆ ಮತ್ತು ಬಲಿದಾನ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.