ಯಾದಗಿರಿ –
ಇಬ್ಬರು ಹೆಂಡತಿಯರಿಗೆ ಕೈಕೊಟ್ಟು ಮೂರನೇಯ ಮದುವೆಯಾಗಿದ್ದ ಸರ್ಕಾರಿ ಶಾಲೆ ಶಿಕ್ಷಕನನ್ನು ಈಗಾಗಲೇ ಅಮಾನತು ಮಾಡಿದ ಬೆನ್ನಲ್ಲೇ ಪತ್ನಿಯರ ದೂರಿನಿಂದಾಗಿ ಪೊಲೀಸರು ಬಂಧನ ಮಾಡಿದ್ದಾರೆ.ಹೌದು ಈಗಾಗಲೇ ಇಬ್ಬರು ಹೆಂಡತಿ ಇದ್ದರೂ ಕೂಡಾ ಮತ್ತೊಬ್ಬಳನ್ನು ಮದುವೆಯಾಗಿ ಸಿಕ್ಕಿಬಿದ್ದಿರುವ ಶಿಕ್ಷಕರನ್ನು ಸೇವೆಯಿಂದ ಅಮಾನತು ಮಾಡಿದ್ದು ಸೈದಾಪುರ ಹತ್ತಿರದ ನೀಲಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಮೋಹನರಡ್ಡಿ ಸಂಗಾರಡ್ಡಿ ಮೂವರು ಹೆಣ್ಣುಮಕ್ಕಳ ಜೀವನದಲ್ಲಿ ಆಟವಾಡಿದ್ದು ಇದನ್ನು ಮದುವೆಯಾದ ಪತ್ನಿಯರೇ ಬಯಲಿಗೆ ತಗೆದುಕೊಂಡು ಬಂದಿದ್ದು ದೂರು ದಾಖಲು ಮಾಡಿದ್ದಾರೆ

1988ರಲ್ಲಿ ಸುರಪುರ ತಾಲೂಕಿನ ಬೋನಾಳ ಗ್ರಾಮದ ತಿಪ್ಪಮ್ಮಳನ್ನು,1992ರಲ್ಲಿ ವಡಗೇರಾ ತಾಲೂಕಿನ ಜೋಳ ದಡಗಿ ಗ್ರಾಮದ ದೇವಮ್ಮ ಜೊತೆ ಮದುವೆಯಾಗಿದ್ದಾನೆ. ಇಷ್ಟು ಸಾಲದೆಂಬಂತೆ 2007ರಲ್ಲಿ ವಿಜಯಪುರ ಜಿಲ್ಲೆಯ ತುಂಬಗಿ ಗ್ರಾಮದ ಗುರುಸಂಗಮ್ಮ ಎಂಬಾಕೆ ಕೈ ಹಿಡಿದಿ ದ್ದಾನೆ ಅಚ್ಚರಿ ಎಂದರೆ ಮೊದಲ ಇಬ್ಬರು ಹೆಂಡತಿಯರಿಗೆ ಈತ ಮೂರನೇ ಮದುವೆಯಾಗಿದ್ದು ಗೊತ್ತೇ ಇರಲಿಲ್ಲ. ಇತ್ತೀಚೆಗಷ್ಟೇ ಎರಡನೇ ಪತ್ನಿ ದೇವಮ್ಮಗೆ ಕಿರುಕುಳ ನೀಡಿ ಮನೆಯಿಂದ ಹೊರಗೆ ಹಾಕಲು ಮುಂದಾಗಿದ್ದ. ನ್ಯಾಯಾ ಲಯದ ಮೊರೆ ಹೋಗುವುದಾಗಿ ಹೇಳಿದ್ದೇ ತಡ ತಾನು ಮತ್ತೊಂದು ಮದುವೆಯಾಗಿದ್ದಾಗಿ ಬಾಯ್ಬಿಟ್ಟಿದ್ದಾನೆ. ಹೀಗಾಗಿ ಮೊದಲ ಇಬ್ಬರು ಪತ್ನಿಯರು ಪತಿ ಮೋಸ ಮಾಡಿದ್ದು ಪೊಲೀಸರಿಗೆ ದೂರನ್ನು ನೀಡಿದ್ದಾರೆ

ಈಗಾಗಲೇ ನ್ಯಾಯ ದೊರಕಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳ ಬಳಿ ಅಳಲು ತೋಡಿಕೊಂಡ ಬೆನ್ನಲ್ಲೇ ಅಮಾನತು ಮಾಡಲಾಗಿದ್ದು ವಿಚಾರಣೆ ನಡೆಸಿದ ಡಿಡಿಪಿಐ ಶಾಂತಗೌಡ ಪಾಟೀಲ್ ಶಿಕ್ಷಕ ಮೋಹನರೆಡ್ಡಿ ಮೂರು ಮದುವೆಯಾಗಿದ್ದನ್ನು ಖಚಿತಪಡಿಸಿಕೊಂಡು ಸೇವೆಯಿಂದ ಅಮಾನತುಗೊಳಿಸಿದ್ದಾರೆ.ಪತ್ನಿಯರು ಪತಿಯಿಂದಾದ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡುವಂತೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ನ್ಯಾಯ ಕೊಡಿಸುವಂತೆ ಇಬ್ಬರು ಪತ್ನಿಯರು ಹಾಗೂ ಅವರ ಮಕ್ಕಳು ಯಾದಗಿರಿ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ ಬಳಿ ಮನವಿ ಮಾಡಿದ್ದರು.


ಸೈದಾಪೂರ ಪೊಲೀಸ್ ಠಾಣೆಯಲ್ಲಿ ಮೋಹನರೆಡ್ಡಿ ಪಾಟೀಲ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಕ್ಕಳ ಭವಿಷ್ಯ ರೂಪಿಸಬೇಕಿದ್ದ ಶಿಕ್ಷಕ ಮದುವೆ ಆಗುವು ದನ್ನೇ ಖಯಾಲಿ ಮಾಡಿಕೊಂಡಿದ್ದು ವರ್ತಮಾನದ ದುರಂತ.ದೂರು ದಾಖಲಾಗುತ್ತಿದ್ದಂತೆ ಪೊಲೀಸರು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ