ಬೆಂಗಳೂರು –
ಸರ್ಕಾರಿ ನೌಕರರ ಸಂಘದ ಆಡಳಿತಾಧಿಕಾರಿ ನೇಮಕಕ್ಕೆ ತಡೆಯಾಜ್ಞೆ – ವಿರೋಧದ ಬೆನ್ನಲ್ಲೇ ತಡೆಯಾಜ್ಞೆ ನೀಡಿದ ಹೈಕೋರ್ಟ್…..ಹೌದು
ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯ ಸಮಯದಲ್ಲಿ ಸರ್ಕಾರಿ ನೌಕರ ಸಂಘಕ್ಕೆ ಆಡಳಿತ ಅಧಿಕಾರಿಯನ್ನು ನೇಮಕ ಮಾಡಲಾಗಿತ್ತು.ನೇಮಕದ ಬೆನ್ನಲ್ಲೇ ಈ ಒಂದು ವಿಚಾರದಲ್ಲಿ ಸಾಕಷ್ಟು ಪ್ರಮಾಣ ದಲ್ಲಿ ತೀವ್ರವಾದ ವಿರೋಧ ಕೂಡಾ ವ್ಯಕ್ತವಾಗಿತ್ತು ಇನ್ನೂ ಇದನ್ನು ಪ್ರಶ್ನೆ ಮಾಡಿ ಹೈ ಕೋರ್ಟ್ ಗೆ ಅರ್ಜಿ ಯನ್ನು ಕೂಡಾ ಸಲ್ಲಿಸಲಾಗುತ್ತು
ವಿಚಾರಣೆಯನ್ನು ನಡೆಸಿದ ನ್ಯಾಯಾಲಯವು ಈ ಒಂದು ನೇಮಕಾತಿಗೆ ಹೈಕೊರ್ಟ್ ನಿಂದ ತಡೆಯಾಜ್ಞೆ ಬಂದಿದೆ.ಈ ಒಂದು ವಿಚಾರವನ್ನು ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯ ವರು ರಾಜ್ಯದ ಎಲ್ಲಾ ಜಿಲ್ಲಾ-ತಾಲೂಕು ಅಧ್ಯಕ್ಷರುಗಳಿಗೆ, ಪದಾಧಿಕಾರಿಗಳಿಗೆ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಕಳೆದ ವಾರ ಆಡಳಿತಾಧಿ ಕಾರಿ ಯನ್ನು ನೇಮಿಸಿದ್ದ ಆದೇಶಕ್ಕೆ ಸಧ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ಸುದೀರ್ಘ ವಿಚಾರಣೆಯನ್ನು ನಡೆಸಿತು.
ವಿಚಾರಣೆ ನಡೆಸಿದ ಕರ್ನಾಟಕ ಉಚ್ಚ ನ್ಯಾಯಾಲ ಯವು ರಾಜ್ಯ ಸರ್ಕಾರಿ ನೌಕರ ಸಂಘಕ್ಕೆ ನೇಮಿಸಿದ್ದ ಆಡಳಿತಾಧಿಕಾರಿ ಆದೇಶಕ್ಕೆ ತಡೆಯಾಜ್ಞೆಯನ್ನು ನೀಡಿ ಆದೇಶಿಸಿದೆ.ಇದರೊಂದಿಗೆ ವಿಚಾರಣೆಯನ್ನು ಅಕ್ಟೋಬರ್ 16 ಕ್ಕೆ ಮುಂದೂಡಿತು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..