ಧಾರವಾಡ –
ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಮೂಗನ್ನು ಕಡಿದ ಘಟನೆ ಧಾರವಾಡ ತಾಲ್ಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ನಡೆದಿದೆ.ಉಮೇಶ ಗಂಡುಗುದರಿ ಎಂಬುವನೇ ತನ್ನ ಹೆಂಡತಿ ಗೀತಾ ಅವರ ಮೂಗನ್ನು ಕಡಿದಿದ್ದಾನೆ. ನಂತರ ಗೀತಾಳ ತಾಯಿ ನೀಲವ್ವ ಕುತ್ತಿಗೆಯನ್ನು ಹಿಚುಕಿದ್ದು ಈ ಒಂದು ಸುದ್ದಿಯನ್ನು ಕೇಳಿದ ಅಕ್ಕ ಪಕ್ಕದವರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಸ್ಥಳದಿಂದ ಉಮೇಶ ಎಸ್ಕೇಫ್ ಆಗಿದ್ದಾನೆ. ಗೀತಾ ಕಳೆದ ಹಲವಾರು ವರುಷಗಳಿಂದ ಪತಿಯನ್ನು ಬಿಟ್ಟು ತಾಯಿಯೊಂದಿಗೆ ಅಮ್ಮಿನಬಾವಿ ಗ್ರಾಮದಲ್ಲಿದ್ದರು.ಇಂದು ಸಂಜೆ ಕಂಠಪೂರ್ತಿಯಾಗಿ ಕುಡಿದು ಬಂದ ಉಮೇಶ ಏಕಾಎಕಿಯಾಗಿ ಮನೆಗೆ ನುಗ್ಗಿ ಹೆಂಡತಿಯೊಂದಿಗೆ ಜಗಳ ಆರಂಭವನ್ನು ಮಾಡಿ ಮೂಗನ್ನು ಕಡಿದು ನಂತರ ಅವರ ಅತ್ತೆಯ ಕುತ್ತಿಗೆಯನ್ನು ಹಿಚುಕಿ ಸಾರ್ವಜನಿಕರು ಸ್ಥಳಕ್ಕೆ ಬರುತ್ತಿದ್ದಂತೆ ಸ್ಥಳದಿಂದ ಉಮೇಶ ಪರಾರಿಯಾಗಿದ್ದಾರೆ.
ಇನ್ನೂ ಯುವ ಮುಖಂಡ ಬಸವರಾಜ ಕುರಹಟ್ಟಿ ಸ್ಥಳಕ್ಕೆ ಆಗಮಿಸಿ ಪೊಲೀಸರಿಗೆ ಮಾಹಿತಿಯನ್ನು ನೀಡಿದರು. ಇವರ ಮತ್ತು ಸಾರ್ವಜನಿಕರ ಸಮಯ ಪ್ರಜ್ಞೆಯಿಂದಾಗಿ ದೊಡ್ಡದಾದ ಅನಾಹುತವೊಂದು ಗ್ರಾಮದಲ್ಲಿ ತಪ್ಪಿದಂತಾಗಿದ್ದು ಸಧ್ಯ ಗ್ರಾಮಕ್ಕೆ ಧಾರವಾಡ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.