ಹುಬ್ಬಳ್ಳಿ –
ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ: ಸಮಯ ಪ್ರಜ್ಞೆ ಮೆರೆದ ತುರ್ತು ಸೇವೆಗಳ ಇಲಾಖೆ…!
ಹೌದು ವಾಣಿಜ್ಯ ನಗರಿ ಹುಬ್ಬಳ್ಳಿಯ ಉಣಕಲ್ ಕೆರೆ ಹತ್ತಿರದ ಪ್ರೆಸಿಡೆಂಟ್ ಹೊಟೇಲ್ ಬಳಿಯಲ್ಲಿ ಕಾರ್ ವೊಂದು ಹೊತ್ತಿ ಉರಿಯುತ್ತಿದ್ದು,ಸುದ್ಧಿ ತಿಳಿಯುತ್ತಿ ದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಹಾಗೂ ತುರ್ತು ಸೇವೆ ಇಲಾಖೆಯ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು..ತಾಂತ್ರಿಕ ತೊಂದರೆಯಿಂದ ರಸ್ತೆ ಮಧ್ಯ ದಲ್ಲಿಯೇ ಇಂಡಿಕಾ ಕಾರ್ ಗೆ ತಗುಲಿದ ಬೆಂಕಿಯನ್ನು ಅಗ್ನಿಶಾಮಕ ಅಧಿಕಾರಿ ವಿನಾಯಕ ಕಲ್ಗುಟಕರ ನಿರ್ದೇಶನದಲ್ಲಿ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಇನ್ನೂ ಏಕಾಏಕಿ ಕಾಣಿಸಿಕೊಂಡ ಬೆಂಕಿಯಿಂದ ಸ್ಥಳೀಯರು ಆತಂಕಗೊಂಡಿದ್ದರು.ಆದರೆ ಸಮ ಯಕ್ಕೆ ಸರಿಯಾಗಿ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಜನರ ಆತಂಕ ದೂರ ಮಾಡಿದ್ದಾರೆ.
ಸಂಪೂರ್ಣವಾಗಿ ಸುಟ್ಟ ಕರಕಲಾಗಿದೆ ಇಂಡಿಕಾ ಕಾರು.ಹೋಗುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ ಯಿಂದಾಗಿ ಈ ಒಂದು ಅವಘಡ ನಡೆದಿದೆ. ಕಾರಿ ನಲ್ಲಿ ದ್ದವರು ಅದೃಷ್ಟವಶಾತ್ ಪಾರಾಗಿದ್ದಾರೆ.ತಪ್ಪಿತು ದೊಡ್ಡ ಅವಘಡವೊಂದು.