ಉತ್ತರ ಪ್ರದೇಶ –
ಕೋವಿಡ್ ತೀವ್ರತೆಯ ಹಿನ್ನೆಲೆಯಲ್ಲಿ ನಮ್ಮ ರಾಜ್ಯ ದಲ್ಲಿ ಇನ್ನೂ SSLC, PUC ಪರೀಕ್ಷೆ ಕುರಿತು ಗೊಂದ ಲ ದಲ್ಲಿ ಸರ್ಕಾರ ಸಚಿವರು ಇದ್ದಾರೆ.ಮಾಡಬೇಕು ಮಾಡಬಾರದು ಇನ್ನೂ ಕೂಡಾ ಚಿಂತನೆ ಮಂಥನ ಮಾಡತಾ ಇದ್ದಾರೆ ಇವೆಲ್ಲದರ ನಡುವೆ ಉತ್ತರ ಪ್ರದೇಶದಲ್ಲಿ ಈಗಾಗಲೇ ಒಂದು ಒಳ್ಳೆಯ ತೀರ್ಮಾ ನವನ್ನು ಅಲ್ಲಿನ ಸರ್ಕಾರ ಶಿಕ್ಷಣ ಸಚಿವರು ತಗೆದು ಕೊಂಡಿದ್ದಾರೆ.ಹೌದು ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆ ಉತ್ತರ ಪ್ರದೇಶ ಸರ್ಕಾರ ಮಹತ್ವ ದ ನಿರ್ಧಾರ ತೆಗೆದುಕೊಂಡಿದೆ.ರಾಜ್ಯದ ಎಲ್ಲಾ ಶಾಲೆ ಗಳಿಗೆ 2021-2022ರ ಶೈಕ್ಷಣಿಕ ವರ್ಷದಲ್ಲಿ ಶುಲ್ಕ ಹೆಚ್ಚಳ ಮಾಡದಂತೆ ಸೂಚನೆ ನೀಡಿದೆ. ರಾಜ್ಯದ ಉಪ ಮುಖ್ಯಮಂತ್ರಿ ಮತ್ತು ಪ್ರೌಢ ಶಿಕ್ಷಣ ಸಚಿವ ದಿನೇಶ್ ಶರ್ಮಾ ಸೂಚನೆ ನೀಡಿದ್ದಾರೆ
ಹೌದು ಕೋವಿಡ್ನಿಂದಾಗಿ ಅನೇಕ ಕುಟುಂಬಗಳು ಆರ್ಥಿಕವಾಗಿ ತೊಂದರೆ ಅನುಭವಿಸಿವೆ ಹೀಗಾಗಿ ಶಾಲೆಗಳನ್ನು ಮುಚ್ಚಲಾಗಿದೆ.ಆದರೆ ಮಕ್ಕಳಿಗೆ ಆನ್ ಲೈನ್ ತರಗತಿ ನಡೆಯುತ್ತಿದೆ.ಇದೆಲ್ಲವನ್ನು ಗಮನದ ಲ್ಲಿಟ್ಟುಕೊಂಡು ಸಾರ್ವಜನಿಕರಿಗೆ ಯಾವುದೇ ಹೆಚ್ಚು ವರಿ ಹೊರೆ ಆಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದರು. ಹಾಗೆಯೇ ಶಿಕ್ಷಕರು ಮತ್ತು ಶಾಲೆಗಳಲ್ಲಿ ಕೆಲಸ ಮಾಡುವ ಇತರ ಉದ್ಯೋಗಿಗ ಳಿಗೆ ನಿಯಮಿತವಾಗಿ ವೇತನ ಸಿಕ್ತಿದೆಯೇ ಎಂಬು ದನ್ನು ಖಾತ್ರಿಪಡಿಸಿಕೊಳ್ಳಬೇಕಿದೆ.2019-2020ನೇ ಶೈಕ್ಷಣಿಕ ವರ್ಷದಲ್ಲಿ ಜಾರಿಗೆ ಬಂದಿರುವ ಶುಲ್ಕವನ್ನೇ ಈ ಬಾರಿಯೂ ವಿಧಿಸಬೇಕೆಂದು ಸರ್ಕಾರ ಸೂಚನೆ ನೀಡಿದೆ. ಈಗಾಗಲೇ ಶುಲ್ಕ ಏರಿಸಿ ಪಾಲಕರಿಂದ ಶುಲ್ಕ ಪಡೆದಿದ್ದರೆ ಅದನ್ನು ಮುಂದಿನ ವರ್ಷ ಶುಲ್ಕ ಕ್ಕೆ ಸರಿ ಹೊಂದಿಸಬೇಕೆಂದು ಸರ್ಕಾರ ಹೇಳಿದೆ. ಶಾಲೆ ಮುಚ್ಚಿರುವ ಅವಧಿಯಲ್ಲಿ ಸಾರಿಗೆ ಶುಲ್ಕವನ್ನು ಪಡೆಯುವಂತಿಲ್ಲ ಎಂದು ಸರ್ಕಾರ ಹೇಳಿದೆ ಎಂದ ರು ಇದನ್ನು ನೋಡತಾ ಇದ್ದರೆ ಅಲ್ಲಿ ಶಿಕ್ಷಣ ಸಚಿವ ರು ಎಷ್ಟು ವೇಗವಾಗಿದ್ದು ಇನ್ನೂ ನಮ್ಮಲ್ಲಿ ಹೀಗ್ಯಾಕೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡತಾ ಇದೆ.