ಬೆಂಗಳೂರು –
ಮಹಾ ಸಮ್ಮೇಳನಕ್ಕೆ ಬೆಂಬಲ ಘೋಷಣೆ ಮಾಡಿದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ – ಸಮ್ಮೇಳನದಲ್ಲಿ ಪಾಲ್ಗೊಳ್ಳು ವಂತೆ ರಾಜ್ಯದ ಶಿಕ್ಷಕರಿಗೆ ಕರೆ ಹೌದು
ಫೆಬ್ರುವರಿ 27 ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನಕ್ಕೆ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಬೆಂಬಲವನ್ನು ಘೋಷಣೆ ಮಾಡಿದೆ ಅಲ್ಲದೇ ಈ ಒಂದು ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಶಿಕ್ಷಕರಿಗೆ ಕರೆಯನ್ನು ನೀಡಿದ್ದಾರೆ.ಹೌದು ರಾಜ್ಯಮಟ್ಟದಲ್ಲಿ ನಡೆದ ಸಮಾವೇಶದಲ್ಲಿ ಬೆಂಬಲ ಘೋಷಣೆ ಮಾಡಿದ್ದು ಶಿಕ್ಷಕರಿಗೆ ಭಾಗವಹಿಸಲು ಕರೆ ನೀಡಲಾಯಿತು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಇವರು ಫೆಬ್ರವರಿ 27 ರಂದು ಅರಮನೆ ಮೈದಾನದಲ್ಲಿ ಆಯೋಜಿಸಿರುವ ರಾಜ್ಯ ಸರಕಾರಿ ನೌಕರರ ಮಹಾ ಸಮ್ಮೇಳನ ದಲ್ಲಿ ನೌಕರರ ಪ್ರಮುಖ ಬೇಡಿಕೆಗಳಾದ 7 ವೇತನ ಆಯೋಗದ ಶೀಘ್ರ ವರದಿ ಜಾರಿ.ಹಳೆ ಪಿಂಚಣಿ ಯೋಜನೆಯನ್ನು ಮರು ಸ್ಥಾಪಿಸು ವುದು.ಆರೋಗ್ಯ ಸಂಜೀವಿನಿ ಯೋಜನೆಯನ್ನು ಲೋಕಾರ್ಪಣೆಗೊಳಿಸುವುದು ಇನ್ನೂ ಅನೇಕ ಬೇಡಿಕೆಗಳು ಜಾರಿಯಾಗುವ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ತಾವೆಲ್ಲರೂ ಭಾಗಿಯಾಗಿ ಮಹಾ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕಾಗಿ ರಾಜ್ಯದ ಸಮಸ್ತ ಪ್ರೌಢಶಾಲಾ ಶಿಕ್ಷಕರ ಸಂಘವು ರಾಜ್ಯದ ಶಿಕ್ಷಕರನ್ನು ಕೋರಿದೆ.
ರಾಜ್ಯಾಧ್ಯಕ್ಷರಾದ ಸಿದ್ದಬಸಪ್ಪ ಬಿ,ಪ್ರಧಾನ ಕಾರ್ಯದರ್ಶಿಗಳಾದ ರಾಮು ಗುಗವಾಡ, ಉಪಾಧ್ಯಕ್ಷರಾದ ಎಂ ಕೆ ಬಿರಾದರ,ಧನಸಿಂಗ್ ರಾಠೋಡ,ದೇವರಾಜೇಗೌಡ,ತುಕಾರಾಮ ಬಾಗೇಣ್ಣನವರ ಸೇರಿದಂತೆ ಸಂಘಟನೆಯ ಮುಖಂಡರು ಸರ್ವ ಸದಸ್ಯರು ಕೋರಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..