ಚಂದ್ರಶೇಖರ್ ಗುರೂಜಿಯ ಹತ್ಯೆಯ ಹಿಂದಿನ ಕಾರಣ ಬಿಚ್ಟಿಟ್ಟ ಹಂತಕರು – ಸಾಯಿಸದೇ ಬೇರೆ ವಿಧಿಯಿರಲಿಲ್ಲ ಎನ್ನುತ್ತಾ ಕೊಲೆ ಹಿಂದಿನ ಕಾರಣ ಬಿಚ್ಚಿಟ್ಟ ಹಂತಕರು…..

Suddi Sante Desk

ಹುಬ್ಬಳ್ಳಿ –

ಸರಳ ವಾಸ್ತು ಮೂಲಕ ರಾಜ್ಯದ ಜನತೆಗೆ ಚಿರಪರಿಚಿತವಾ ಗಿದ್ದ ಚಂದ್ರಶೇಖರ್ ಗುರೂಜಿ ಹತ್ಯೆಯ ಹಿಂದಿನ ಕಾರಣ ವನ್ನು ಹಂತಕರು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾರೆಹೌದು ಇವರ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು ಚಂದ್ರಶೇ ಖರ್ ಗುರೂಜಿಯನ್ನು ಕೊಲೆ ಮಾಡಿದ ಸಿಸಿ ಟಿವಿ ದೃಶ್ಯಾವ ಳಿಗಳು ವೈರಲ್ ಆದ ಬಳಿಕ ಎಲ್ಲರಲ್ಲೂ ಮೂಡಿದ್ದ ಪ್ರಶ್ನೆ ಅಷ್ಟೊಂದು ಕ್ರೂರವಾಗಿ ಗುರೂಜಿ ಕೊಲೆ ಮಾಡುವಂತಹ ದ್ವೇಷ ಈ ಕೊಲೆಗಾರರಿಗೆ ಏನಿತ್ತು ಯಾವ ಕಾರಣಕ್ಕಾಗಿ ಈ ಒಂದು ಕೊಲೆಯನ್ನು ಅಲ್ಲದೇ ಇವರು ಒಂದು ಕಾಲದಲ್ಲಿ ಗುರೂಜಿ ಆಪ್ತರೇ ಆಗಿದ್ದರಿಂದ ಇಷ್ಟೊಂದು ದೊಡ್ಡ ಮಟ್ಟ ದಲ್ಲಿ ವೈಮನಸ್ಯ ಮೂಡೋಕೆ ಕಾರಣವಾದರೂ ಏನು ಎಂಬ ಪ್ರಶ್ನೆ ಕೂಡ ಹಲವರಲ್ಲಿತ್ತು.ಕೊಲೆ ನಡೆದ ದಿನವೇ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದ ಹುಬ್ಬಳ್ಳಿ ಹಾಗೂ ರಾಮದುರ್ಗ ಠಾಣೆಯ ಪೊಲೀಸರು ಆರೋಪಿಗಳಾದ ಮಹಾಂತೇಶ್ ಶಿರೋಳ್ ಹಾಗೂ ಮಂಜುನಾಥ್ ನನ್ನು ನಿರಂತರ ವಿಚಾರಣೆಗೆ ಒಳಪಡಿಸಿದ್ದಾರೆ.

ಹುಬ್ಬಳ್ಳಿಯ ವಿದ್ಯಾ ನಗರ ಠಾಣೆಯಲ್ಲಿ ವಿಚಾರಣೆಗೆ ಒಳಗಾಗಿರುವ ಈ ಆರೋಪಿಗಳನ್ಮು ಪೊಲೀಸರ ತನಿಖೆ ಸಂದರ್ಭದಲ್ಲಿ ತಪ್ಪೊಪ್ಪಿಕೊಂಡಿದ್ದು ಗುರೂಜಿಯನ್ನು ಅಷ್ಟೊಂದು ಬರ್ಬರವಾಗಿ ಕೊಲೆ ಮಾಡುವ ಹಿಂದಿನ ಕಾರಣವನ್ನು ಬಾಯ್ಬಿಟ್ಟಿದ್ದಾರೆ.ಚಂದ್ರಶೇಖರ್ ಗುರೂಜಿ ಜೊತೆ ನಾವು ಬರೋಬ್ಬರಿ 12 ವರ್ಷಗಳ ಕಾಲ ಕೆಲಸ ಮಾಡಿದ್ದೆವು. 2016ರಲ್ಲಿ ಸರಳ ವಾಸ್ತು ಸಂಸ್ಥೆಯಲ್ಲಿ ಕೆಲಸ ಬಿಟ್ಟು ನಮ್ಮಷ್ಟಕ್ಕೆ ನಾವು ಜೀವನ ನಡೆಸುತ್ತಿದ್ದೆವು. ಆದರೆ ಗುರೂಜಿ ನಮಗೆ ನೆಮ್ಮದಿಯಿಂದ ಬದುಕಲು ಬಿಡಲೇ ಇಲ್ಲ ನಾವು ಯಾವುದೇ ಕೆಲಸ ಮಾಡಲು ಚಂದ್ರಶೇಖರ್ ಗುರೂಜಿ ನಮಗೆ ಅವಕಾಶ ಮಾಡಿ ಕೊಡಲೇ ಇಲ್ಲ. ಉದ್ಯಮ ಆರಂಭಿಸೋಣ ಎಂದು ಹೊರಟಾಗಲೂ ಇದೇ ಗುರೂಜಿ ಅದಕ್ಕೆ ಅಡ್ಡಗಾಲು ಹಾಕಿದ್ದರು

ನಮಗೆ ಬದುಕೋದೇ ಕಷ್ಟ ಎಂಬಂತಾಗಿತ್ತು. ಚಂದ್ರಶೇ ಖರ್ ಗುರೂಜಿಯ ಕಿರುಕುಳ ತಾಳಲಾರದೇ ನಾವು ಈ ಕೆಲಸ ಮಾಡಿದ್ದೇವೆ ಎಂದು ಆರೋಪಿಗಳಿಬ್ಬರು ಪೊಲೀ ಸರು ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.ಸರಳ ವಾಸ್ತು ಸಂಸ್ಥೆ ಯನ್ನು ತೊರೆದ ಬಳಿಕ ನಾವು ರಿಯಲ್ ಎಸ್ಟೇಟ್ ಉದ್ಯ ಮಕ್ಕೆ ಕೈ ಹಾಕಿದ್ದೆವು.ಆದರೆ ಗುರೂಜಿ ನಮಗೆ ನಿರಂತರ ಬೆದರಿಕೆಯೊಡ್ಡುತ್ತಿದ್ದರು.ನಮ್ಮ ಉದ್ಯಮಕ್ಕೆ ಇನ್ನಿಲ್ಲದ ಕಿರಿಕಿರಿ ತಂದಿಡುತ್ತಿದ್ದರು.ಈ ಕಿರುಕುಳಗಳನ್ನು ತಡೆದುಕೊಂ ಡು ನಮಗೂ ರೋಸಿ ಹೋಗಿತ್ತು. ಹೀಗಾಗಿ ಎಲ್ಲಾ ದ್ವೇಷ ವನ್ನು ಕೊಲೆಯ ಮೂಲಕ ತೀರಿಸಿಕೊಂಡೆವು ಎಂದು ಹೇಳಿದ್ದು ಇನ್ನೂ ಪೊಲೀಸರು ತನಿಖೆಯನ್ನು ಮಾಡುತ್ತಿದ್ದು ಇನ್ನೇನು ವಿಚಾರಗಳು ಬೆಳಕಿಗೆ ಬರುತ್ತವೆ ಎಂಬೊದನ್ನು ಕಾದು ನೋಡಬೇಕಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.