ಬೆಂಗಳೂರು –
ತುರ್ತಾಗಿ CM ಭೇಟಿಯಾದ KSPSTA ಟೀಮ್ – 7ನೇ ವೇತನ ಆಯೋಗ,NPS ರದ್ದುತಿ,ಸೇರಿದಂತೆ ಹಲವು ಬೇಡಿಕೆಗಳನ್ನು ಬಜೆಟ್ ನಲ್ಲಿ ಈಡೇರಿಸಿ – ರಾಜ್ಯಾಧ್ಯಕ್ಷ ಕೆ ನಾಗೇಶ್,ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿನ ನಿಯೋಗ
ಫೆಬ್ರುವರಿ 16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ.ಹೌದು ಬೆಳಿಗ್ಗೆ 11 ಗಂಟೆಗೆ ಈ ಒಂದು ಬಜೆಟ್ ನ್ನು ನಾಡದೊರೆ ಮಂಡನೆ ಮಾಡಲಿದ್ದು ಇದರ ನಡುವೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಮುಖ್ಯ ಮಂತ್ರಿಯವರನ್ನು ಭೇಟಿಯಾದರು.
ಹೌದು ಬೆಂಗಳೂರಿನಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಕೆ ನಾಗೇಶ್,ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿನ ನಿಯೋಗವು ಭೇಟಿಯಾಗಿ ಶಿಕ್ಷಕರ ಬಂಧುಗಳ ಹಲವು ಬೇಡಿಕೆಗಳ ಕುರಿತಂತೆ ಮನವಿ ಸಲ್ಲಿಸಿ ದರು.ಪ್ರಮುಖವಾಗಿ ಬಜೆಟ್ ಪೂರ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಭೇಟಿ ಮಾಡಿದ ನಿಯೋಗವು ಹಲವು ಬೇಡಿಕೆಗಳು ಸೇರಿದಂತೆ ಶಿಕ್ಷಕರ ಸಮಸ್ಯೆಗಳನ್ನು ಚರ್ಚೆಯನ್ನು ಮಾಡಿದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಭೇಟಿ ಮಾಡಿ ಬಜೆಟ್ ನಲ್ಲಿ ರಾಜ್ಯದ ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಒದಗಿ ಸಬೇಕು.ರಾಜ್ಯದ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದ ಸೌಲಭ್ಯಗಳನ್ನು ಜಾರಿ ಗೊಳಿಸುವ ವರದಿಯನ್ನು ನಿರೀಕ್ಷಿಸಿ,
ನಿರೀಕ್ಷಿತ ಅನುದಾನವನ್ನು ಮೀಸಲಿಡಲು ಮತ್ತು NPS ರದ್ದುಗೊಳಿಸಿ OPS ಜಾರಿಗೊಳಿಸುವ ಕುರಿತು ಒತ್ತಾಯವನ್ನು ಮಾಡಲಾಯಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ,ಆರ್ಥಿಕ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಈ ಒಂದು ವಿಷಯವನ್ನು ಮುಖ್ಯಮಂತ್ರಿಗಳೊಂದಿಗೆ ಬಜೆಟ್ ಪೂರ್ವದಲ್ಲಿ ಚರ್ಚಿಸಿ ಸಮಸ್ತ ಸರ್ಕಾರಿ ಶಾಲಾ ಶಿಕ್ಷಕರ ಮತ್ತು ನೌಕರರ ಪರವಾಗಿ ಸಂಘಟನೆ ಧ್ವನಿ ಎತ್ತಿದ್ದು ಕಂಡು ಬಂದಿತು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ನಾಗೇಶ್ ಅವರೊಂದಿಗೆ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ವಿಜಯಪುರ ಜಿಲ್ಲೆಯ ಪ್ರಧಾನ ಕಾರ್ಯ ದರ್ಶಿಗಳಾದ ಅರ್ಜುನ ಲಮಾಣಿ,ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..