ಭುವನೇಶ್ವರ –
ತುಂಬು ಗರ್ಭಿಣಿಯನ್ನು ಉರಿಬಿಸಿಲಿನಲ್ಲಿ ಮೂರು ಕಿಲೋ ಮೀಟರ್ ನಡೆಯುವಂತೆ ಮಾಡಿದ ಅಮಾ ನವೀಯ ಘಟನೆ ಭುವನೇಶ್ವರದ ಮಯೂರ್ ಭಂಜ್‌ನಲ್ಲಿ ನಡೆದಿದೆ. ಹೀಗೆ ಮಾಡಿದರು ಓರ್ವ ಲೇಡಿ ಪೊಲೀಸ್ ಇನ್ಸ್‌ಪೆಕ್ಟರ್ ರನ್ನು ಈಗ ಸೇವೆ ಯಿಂದ ಅಮಾನತು ಮಾಡಲಾಗಿದೆ.
ಪತಿಯ ಜತೆ ಬೈಕ್‌ನಲ್ಲಿ ಹಿಂದೆ ಕುಳಿತಿದ್ದ 9 ತಿಂಗಳ ಗರ್ಭಿಣಿ ಹೆಲ್ಮೆಟ್ ಧರಿಸಿಲ್ಲ ಎನ್ನುವ ಕಾರಣ ಉರಿ ಬಿಸಿಲಿನಲ್ಲಿ 3 ಕಿ.ಮೀ ನಡೆಸಿದ್ದಾರೆ ರೀನಾ ಬಕ್ಸಲ್ ಎಂದು ಪೊಲೀಸ್ ಇನ್ಸ್‌ಪೆಕ್ಟರ್. ಈ ಘಟನೆ ನಡೆಯುತ್ತಿದ್ದಂತೆಯೇ ಆಕ್ರೋಶ ವ್ಯಕ್ತಪಡಿಸಿರುವ ಪೊಲೀಸ್ ಇಲಾಖೆ ರೀನಾರನ್ನು ಅಮಾನತು ಮಾಡಿದೆ.
ಪತಿ ವಿಕ್ರಮ್ ಜತೆ ಗುರುಬರಿ ಅವರು ಆಸ್ಪತ್ರೆಗೆ ತೆರಳುತ್ತಿದ್ದರು. ಹಿಂಬದಿ ಕುಳಿತಿದ್ದ ಅವರು ಹೆಲ್ಮೆಟ್ ಧರಿಸಿರಲಿಲ್ಲ. ಅವರನ್ನು ತಡೆದು ನಿಲ್ಲಿಸಿದ್ದ ಇನ್ಸ್‌ಪೆ ಕ್ಟರ್, ದಂಡ ಪಾವತಿಸಲು ವಿಕ್ರಮ್ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಆದರೆ ಈ ವೇಳೆ ಪತ್ನಿಯನ್ನು ಅವರ ಜತೆ ಹೋಗಲು ಬಿಟ್ಟಿರಲಿಲ್ಲ.
ಅಲ್ಲಿಂದ ಸುಮಾರು ಮೂರು ಕಿಲೋ ಮೀಟರ್ ದೂರ ಪೊಲೀಸ್ ಠಾಣೆ ಇತ್ತು.ಆದ್ದರಿಂದ ಅನಿವಾ ರ್ಯವಾಗಿ 27 ವರ್ಷದ ಗರ್ಭಿಣಿ ಗುರುಬರಿ ನಡೆದುಕೊಂಡು ಹೋಗಬೇಕಾಗಿ ಬಂತು. ಈ ವಿಷಯ ತಿಳಿಯುತ್ತಲೇ ಎಸ್ಪಿ ಪರ್ಮಾರ್ ಸ್ಮಿಟ್ ಪರಷೋತ್ತಮ್ ದಾಸ್ ರೀನಾ ಬಕ್ಸಲ್ ಅವರನ್ನು ಅಮಾನತುಗೊಳಿಸಿದ್ದಾರೆ